ಕೊರಗಜ್ಜನ ಕಾರಣಿಕವನ್ನೇ ಅನುಮಾನಿಸಿದ ಪ್ರಕರಣದ ಕಂಪ್ಲೀಟ್ ಸ್ಟೋರಿ…ಪ್ರಕರಣದ ಸತ್ಯಾಸತ್ಯತೆ ಇಲ್ಲಿದೆ.. - Karnataka Crime News: Latest Crime Headlines | Police Varthe
Thursday, May 6 , 2021 4:04 PM

ಕ್ರೈಂ
ಕೊರಗಜ್ಜನ ಕಾರಣಿಕವನ್ನೇ ಅನುಮಾನಿಸಿದ ಪ್ರಕರಣದ ಕಂಪ್ಲೀಟ್ ಸ್ಟೋರಿ…ಪ್ರಕರಣದ ಸತ್ಯಾಸತ್ಯತೆ ಇಲ್ಲಿದೆ..439

ಮಂಗಳೂರು : ಕೊರಗಜ್ಜ ಗುಡಿ ಅಪವಿತ್ರ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದ ಇಬ್ಬರು ಆರೋಪಿಗಳನ್ನು ಬಿಟ್ಟು ಕಳುಹಿಸಿರುವುದಾಗಿ ಮಂಗಳೂರು ನಗರ ಕಮೀಷನರ್ ಎನ್.‌ಶಶಿಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಮೇಲೆ ಆರೋಪವೊಂದು ಕೇಳಿಬಂದಿದ್ದು, ಪ್ರಕರಣದ ಬೆನ್ನು ಬಿದ್ದ Policevarthe.com ನೈಜ ವರದಿ ಮಾಡಲು ಮುಂದಾಗಿದ್ದು, ವರದಿಯಲ್ಲಿನ ಸತ್ಯಾಸತ್ಯತೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಡೆಸಿದೆ.

ಕಳೆದ‌ ತಿಂಗಳ 31 ನೇ ತಾರೀಖಿನಂದು ಎಮ್ಮೆಕೆರೆಯ ಕೊರಗಜ್ಜ‌ ದೈವಸ್ಥಾನದಲ್ಲಿ ಕೋಲದ ದಿನ ಕೊರಗಜ್ಜನ ಗುಡಿ ಅಪವಿತ್ರ ಮಾಡಿದ್ದರೆನ್ನಲಾದ ಇಬ್ಬರು ‌ತಪ್ಪೊಪ್ಪಿಗೆ ನೀಡಿ ಪ್ರಸಾದ ಕೇಳಿದ್ದು, ಈ ವಿಚಾರ ಭಾರೀ ಸುದ್ದಿಯಾಗುತ್ತಲೇ ರಂಗ ಪ್ರವೇಶಿಸಿದ ಪೋಲಿಸ್ ಇಲಾಖೆ ನಂತರ ಅವರಿಬ್ಬರನ್ನೂ ಸೆಕ್ಷನ್ 169 ರ ಅಡಿಯಲ್ಲಿ ವಶಕ್ಕೆ ಪಡೆದಿತ್ತು. ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಕಮೀಷನರ್ ಎನ್. ಶಶಿಕುಮಾರ್, ಇಬ್ಬರು ವ್ಯಕ್ತಿಗಳು ತಪ್ಪು ಒಪ್ಪಿಕೊಂಡಿದ್ದು , ವಿವಿಧೆಡೆ ನಡೆದಿರುವ ದೈವಸ್ಥಾನಗಳ ಅಪವಿತ್ರ ಪ್ರಕರಣದಲ್ಲಿ ಇಬ್ಬರ ಕೈವಾಡ ಸಾಬೀತಾಗಿದೆ. ಒಂದು ತಿಂಗಳ ಹಿಂದೆ ನವಾಜ್ ಎಂಬಾತ ರಕ್ತಕಾರಿಕೊಂಡು ಸತ್ತಿದ್ದು, ಇದರಿಂದ ಭಯಗೊಂಡ ಇಬ್ಬರು ಕೊರಗಜ್ಜನ ದೈವಸ್ಥಾನಕ್ಕೆ ಬಂದಿದ್ದಾರೆ. ಸತ್ತಿರುವ ನವಾಝ್ ಮಂತ್ರವಾದಿಯಾಗಿದ್ದ ಅಲ್ಲದೆ ಇಬ್ಬರನ್ನು ವಶಕ್ಕೆ ಪಡೆದು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದರು.

ಸೆಕ್ಷನ್ 169 ಏನು ಹೇಳುತ್ತದೆ?; ವಿಚಾರಣೆ ನಡೆಸಿದ ಪೋಲಿಸರಿಗೆ ವಶಕ್ಕೆ ಪಡೆದ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫೀಕ್ ಇಬ್ಬರ ಹೇಳಿಕೆಗಳಲ್ಲಿ ಅಪರಾಧ ಕೃತ್ಯ ಎಸಗಿರುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಅಲ್ಲದೆ ‌169 ಆ್ಯಕ್ಟ್ ನಡಿಯಲ್ಲಿ ಆರೋಪಿಗಳಿಗೆ 24 ಗಂಟೆಗಳ ಮೀರಿ ಬಂಧನದಲ್ಲಿಡಲಾಗುವುದಿಲ್ಲ ಮತ್ತು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗುವುದಿಲ್ಲ‌. 1973 ರ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ನಲ್ಲಿ ಸೆಕ್ಷನ್ 169 ಸಾಕ್ಷ್ಯಾಧಾರಗಳ ಕೊರತೆಯಿದ್ದಾಗ ಆರೋಪಿಗಳ ಬಿಡುಗಡೆ ಮಾಡಬಹುದು. ಈ ಸೆಕ್ಷನ್ ಅಡಿಯಲ್ಲಿ ನಡೆದ ತನಿಖೆಯ ಮೇರೆಗೆ, ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಆರೋಪಿಯನ್ನು ಮ್ಯಾಜಿಸ್ಟ್ರೇಟ್‌ಗೆ ಕಳುಹಿಸುವುದನ್ನು ಸಮರ್ಥಿಸಲು ಸಾಕಷ್ಟು ಪುರಾವೆಗಳು ಅಥವಾ ಅನುಮಾನಾಸ್ಪದ ಆಧಾರಗಳಿಲ್ಲ ಎಂದು ಕಂಡುಬಂದರೆ, ಬಂಧಿತರನ್ನು ಜಾಮೀನುದಾರರೊಂದಿಗೆ ಅಥವಾ ಇಲ್ಲದೆ ಬಿಡುಗಡೆ ಮಾಡಬಹುದು. ಅಲ್ಲದೇ ಅಗತ್ಯವಿದ್ದರೆ ಮತ್ತು ಅಗತ್ಯವಿದ್ದಾಗ ಹಾಜರಾಗಲು, ಪೊಲೀಸ್ ವರದಿಯಲ್ಲಿ ಅಪರಾಧದ ಅರಿವನ್ನು ತೆಗೆದುಕೊಳ್ಳಲು ಮ್ಯಾಜಿಸ್ಟ್ರೇಟ್ ಅಧಿಕಾರ ನೀಡುವ ಮೊದಲು, ಆರೋಪ ಅಥವಾ ವಿಚಾರಣೆಗೆ‌ ಒಪ್ಪಿಸಿ‌ ಮತ್ತೆ ವಶಕ್ಕೆ ಪಡೆಯಬಹುದಾಗಿದೆ. ಹಾಗಾಗಿ ವಶಕ್ಕೆ ಪಡೆದ ಇಬ್ಬರನ್ನೂ ಪೋಲಿಸರು ಬಿಟ್ಟು ಕಳುಹಿಸಿದ್ದು, ಅಗತ್ಯ ಬಿದ್ದಾಗ ಅವರನ್ನು ಮತ್ತೆ ವಿಚಾರಣೆಗೆ ಕರೆಯುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಗೊಂದಲ ಯಾಕೆ?; ಕೊರಗಜ್ಜ ನ ಕಾರಣಿಕ ಶಕ್ತಿಗೆ ಎಲ್ಲರೂ ತಲೆಬಾಗಲೇಬೇಕು. ತುಳುನಾಡು ಹೊರತುಪಡಿಸಿ ಕೆಲ ಹಿಂದಿ ಮಾಧ್ಯಮಗಳಲ್ಲೂ ಕೂಡ ಕೊರಗಜ್ಜನ ಬಳಿ ಇಬ್ಬರು ಬಂದು ತಪ್ಪೊಪ್ಪಿಕೊಂಡಿರುವ ಕುರಿತು ಸುದ್ದಿ ಬಿತ್ತರಿಸಲಾಗಿದೆ. ಇದರ ನಡುವೆ ಸಾವಿಗೀಡಾಗಿದ್ದ ಎನ್ನಲಾದ ನವಾಝ್ ನ ತಾಯಿ ಮತ್ತೊಂದು ಹೇಳಿಕೆ ನೀಡಿದ್ದು ಪ್ರಕರಣ ಮತ್ತೆ ಗಂಭೀರ ಸ್ವರೂಪ ಪಡೆದುಕೊಂಡಿತು. ನವಾಝ್ ನಿಗೆ ಮಾರಕ ಏಡ್ಸ್ ಕಾಯಿಲೆಯಿಂದ ಮೃತಪಟ್ಟಿದ್ದು, ಕೊರಗಜ್ಜನ ಶಾಪದಿಂದ ಅಲ್ಲ ಎಂದು ನವಾಝ್ ತಾಯಿಯ ಹೇಳಿಕೆಯ ಕುರಿತಾಗಿ‌ ಮಾಧ್ಯಮಗಳಲ್ಲೂ‌ ಸುದ್ದಿ ಪ್ರಕಟವಾಯಿತು. ಆದರೆ ಈಗಾಗಲೇ ವಶಕ್ಕೆ ಪಡೆದ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫೀಕ್ ಅವರನ್ನು 2 ದಿನಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಬಂಧಿತರ ವಿರುದ್ದ ಸೆಕ್ಷನ್ 169 ರನ್ವಯ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಪೂರಕ ಸಾಕ್ಷ್ಯಗಳು ದೊರೆತಿಲ್ಲ. ಹಾಗಾಗಿ ಸಾಕ್ಷ್ಯಗಳು ದೊರೆತ ತಕ್ಷಣ ಕೂಡಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಅವರು ಈಗಲೂ ಶಂಕಾಸ್ಪದ ಆರೋಪಿಗಳಾಗಿದ್ದಾರೆ ಎಂದು ಮಂಗಳೂರು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ತಮ್ಮ ಸ್ನೇಹಿತನಾಗಿದ್ದ ನವಾಝ್ ಕೆಲವು ದೈವಸ್ಥಾನಗಳನ್ನು ಅಪವಿತ್ರಗೊಳಿಸುವ ಕೃತ್ಯವೆಸಗಿದ್ದು, ಆತ ಅನಾರೋಗ್ಯಕ್ಕೆ ಒಳಗಾಗಿ ಮೃತಪಟ್ಟಾಗ ನಮಗೂ ಭಯವಾಗಿದೆ. ಹಾಗಾಗಿ ಎಮ್ಮೆಕೆರೆಯ ಕೊರಗಜ್ಜನ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಲು ಬಂದಿದ್ದೇವೆ ಎಂದು ಇಬ್ಬರು ಶಂಕಾಸ್ಪದ ಆರೋಪಿಗಳು ಹೇಳಿದ್ದಾರೆ. ಆದರೆ ಅವರು ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿದ್ದರು ಎಂಬುವುದಕ್ಕೆ ಪೂರಕ ಸಾಕ್ಷಿ ದೊರಕಿದ ಬಳಿಕ ಬಂಧಿಸಲಾಗುತ್ತದೆ ಎಂದು ಕಮೀಷನರ್ ಮಾಹಿತಿ ನೀಡಿದ್ದರಾದರೂ ಈ ಮಾಹಿತಿಯನ್ನು ತಿರುಚುವ ಯತ್ನ ನಡೆಸಿ ಗೊಂದಲಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಈ ಪ್ರಕರಣದ ತನಿಖೆ‌ ಮುಂದುವರೆದಿದ್ದು, ಅಕ್ರಮ ಕೃತ್ಯ ಎಸಗಿದವರು ಕಾನೂನಿನಡಿಯಲ್ಲಿ ಬಂಧಿಯಾಗುವುದರಲ್ಲಿ‌‌ ಅನುಮಾನವೇ ಇಲ್ಲ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ...

ಮಂಗಳೂರು; ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮಷಿನ್, ಸಿಸಿಟಿವಿಗಳನ್ನು ಜಖಂ...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್...

ಮಂಗಳೂರು:  ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಇರಿಸಿ ಸರ್ಕಾರದ ನಿಯಮ‌ ಉಲ್ಲಂಘನೆ ಮಾಡಿದ...


ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ...

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ ಯುವ...


ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ...

ಮಂಗಳೂರು; ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!