ಕೊರೊನಾ ಎರಡನೇ ಅಲೆಯ ವೇಳೆ ನೆರವಿಗೆ ಧಾವಿಸಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಕಾರ್ಯವೈಖರಿಯೇ ಅಧ್ಬುತ! - Karnataka Crime News: Latest Crime Headlines | Police Varthe
Thursday, May 6 , 2021 3:56 PM

ಕ್ರೈಂ
ಕೊರೊನಾ ಎರಡನೇ ಅಲೆಯ ವೇಳೆ ನೆರವಿಗೆ ಧಾವಿಸಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಕಾರ್ಯವೈಖರಿಯೇ ಅಧ್ಬುತ!65

ಮಂಗಳೂರು; ಬಿ.ವಿ ಶ್ರೀನಿವಾಸ್ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ. ಕೊರೊನಾ ಎರಡನೇ ಅಲೆಯ ಸಂದರ್ಭ ಇವರ ಕಾರ್ಯವೈಖರಿಯೇ ಅದ್ಭುತ. ಇವರ ಕಾರ್ಯವೈಖರಿಗೆ ಎಲ್ಲರೂ ಮನಮೆಚ್ಚಿ ತಲೆದೂಗಿದ್ದಾರೆ. ಇಂದು ಕೊರೊನಾ ಎರಡನೇ ಅಲೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಒಂದು ಕ್ಷಣ ಮೈಮರೆತ ಕಾರಣ ಇಡೀ ದೇಶವೇ ಘೋರ ಸಂಕಟದಲ್ಲಿದೆ. ದುಡಿಯುವ ಕೈಗಳಿದ್ದರೂ ಕೊಡುವ ಉದ್ಯೋಗಧಾತರಿಲ್ಲ. ಇಂತಹಾ ಸಂಕಟದ ಪರಿಸ್ಥಿತಿಯಲ್ಲಿ ಬಡವರ ಬದುಕಂತೂ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ದುಡಿಯಲು ದುಡಿಮೆ ಇಲ್ಲ, ಉಣ್ಣಲು ಅನ್ನವಿಲ್ಲ, ಕೊಡುವವರ ಕೈ ಕೂಡಾ ಬರಿದಾಗಿದೆ. ಒಟ್ಟಾರೆ ಬಡವರ ಬದುಕಂತೂ ಘನಘೋರವಾಗಿದೆ.

ಇಂತಹಾ ಸಂದರ್ಭದಲ್ಲೂ ಬಡವರ ಕಣ್ಣೀರೊರೆಸುವ ಕೈಯೊಂದು ಮುಂದೆ ಬಂದಿದೆ. ಅವರೇ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್. ಬಡವರ ಬಂಧುವೆಂದೇ ಪ್ರಸಿದ್ಧರಾದ ಇವರು ಎಲೆಮರೆಯ ಕಾಯಿಯಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ‌ ಮಾರ್ಗದರ್ಶನದಲ್ಲಿ ಬಡವರ‌ ಕಣ್ಣೀರೊರೆಸುವ ಪುಣ್ಯದ ಕೆಲಸವನ್ನು ಮಾಡುತ್ತಿದ್ದಾರೆ. ಕಳೆದ ವರ್ಷ ಮೋದಿ ವಿವೇಚನಾರಹಿತವಾಗಿ ಧಿಡೀರ್ ಎಂದು ಲಾಕ್ ಡೌನ್ ಘೋಷಿಸಿದಾಗ ವಲಸೆ ಕಾರ್ಮಿಕರ ಹಾಗೂ ಬಡಜನರ ನೆರವಿಗೆ ಆಹಾರ ಪೂರೈಕೆ, ಸೂಕ್ತ ಔಷಧ ವ್ಯವಸ್ಥೆ ಮಾಡುವ ಮೂಲಕ ಗಮನಸೆಳೆದಿದ್ದರು. ಈ ಬಾರಿಯೂ ಅದೇ ಸತ್‌ಕಾರ್ಯವನ್ನು ಮುಂದುವರೆಸಿದ್ದಾರೆ‌.

ಬಿ.ವಿ ಶ್ರೀನಿವಾಸ್ ಅವರ ಕಾರ್ಯವೈಖರಿ ಹೇಗಿದೆ ಗೊತ್ತಾ?; ಸರ್ ನಾವು ಸಂಕಷ್ಟದಲ್ಲಿದ್ದೇವೆ ಎಂದು ಒಂದು ಕರೆ ಮಾಡಿದರೆ ಸಾಕು, ಈ ನಂಬರ್‌ಗೆ ಕರೆ ಮಾಡಿ ನಿಮ್ಮ ಜೊತೆ ನಾವಿದ್ದೇವೆ ಎಂದು ಬಿ.ವಿ ಶ್ರೀನಿವಾಸ್ ಭರವಸೆ ನೀಡುತ್ತಾರೆ. ಅಲ್ಲಿಂದ ನಿಮ್ಮ ಕೆಲಸ ಯಾಂತ್ರಿಕವಾಗಿ ಸಾಗುತ್ತದೆ. ಬಿ.ವಿ ಶ್ರೀನಿವಾಸ್ ರಾವ್ ಈ ಕಾರ್ಯ ವೈಖರಿಯೇ ವಿಶೇಷ. ಸೂಕ್ತ ಆಸ್ಪತ್ರೆ, ಬೆಡ್, ಆಮ್ಲಜನಕ, ಪ್ಲಾಸ್ಮಾ ಹೀಗೆ ಪ್ರತಿಯೊಂದನ್ನೂ ವ್ಯವಸ್ಥೆ ಮಾಡಿಕೊಡುವ ಬಿ.ವಿ ಶ್ರೀನಿವಾಸ್ ಬಡವರ ಪಾಲಿನ ನಿಜವಾದ ದೇವಮಾನವ.

ಕೋವಿಡ್ ರೋಗಿಗಳಿಗಾಗಿ ವಾರ್ ರೂಂ; ಬಿ.ವಿ ಶ್ರೀನಿವಾಸ್ ಅವರು ಕೋವಿಡ್ ರೋಗಿಗಳಿಗಾಗಿಯೇ ವಾರ್ ರೂಂ ತೆರೆದಿದ್ದಾರೆ. ಇದರಲ್ಲಿ ಸೂಕ್ತ ಆಸ್ಪತ್ರೆ, ಬೆಡ್, ಆಮ್ಲಜನಕ, ಪ್ಲಾಸ್ಮಾ ಹೀಗೆ ಪ್ರತಿಯೊಂದೂ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ವಾರ್‌ ರೂಂನಲ್ಲಿ ನಿಮ್ಮ ಸಹಾಯಕ್ಕೆಂದೇ ಹಲವು ಸಿಬ್ಬಂದಿ ಇದ್ದಾರೆ.

ಬಿ.ವಿ ಶ್ರೀನಿವಾಸ್

ಹೇಗೆ ಕೆಲಸ ಮಾಡುತ್ತದೆ?; ಕರೆ ಬಂದ ತಕ್ಷಣ ಅದು ಯಾವ ರಾಜ್ಯದ ‌ನಂಬರ್ ಎಂದು ನೋಡಲಾಗುತ್ತದೆ. ಆ ನಂಬರ್‌‌ ಯಾವ ರಾಜ್ಯಕ್ಕೆ ಅನ್ವಯಿಸುತ್ತದೋ ಅದನ್ನು ಆಯಾಯ ರಾಜ್ಯಕ್ಕೆ ಕಳಿಸಲಾಗುತ್ತದೆ. ನೋದಣಿಯಾಗುವ ರೆಕ್ವೆಸ್ಟ್ ನಂಬರಿನ ಆಧಾರದಲ್ಲಿ ಯಾವ ತರದ ಸಹಾಯ ಬೇಕಾಗುತ್ತದೆ ಎಂದು ಪರಿಶೀಲನೆ ನಡೆಸಲಾಗುತ್ತದೆ‌. ಕರೆ ಮಾಡಿದ ಸಂತ್ರಸ್ತ ಇರುವ ಪ್ರದೇಶದಲ್ಲಿ ಇರುವ ಆಸ್ಪತ್ರೆಯಲ್ಲಿ ಯಾವ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದೆ, ಯಾವ ಸೌಲಭ್ಯ ಇದೆ ಎಲ್ಲವನ್ನೂ ಪರಿಶೀಲಿಸಲಾಗುತ್ತದೆ. ಅದರ ಆಧಾರದಲ್ಲಿ ರೋಗಿಗಳಿಗೆ ಸೂಕ್ತ ಆಸ್ಪತ್ರೆಯನ್ನು ಸೂಚಿಸಲಾಗುತ್ತದೆ. ಆ ಆಸ್ಪತ್ರೆಗೆ ನಮ್ಮ ಸ್ವಯಂಸೇವಕರು ಹೋಗಿ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುತ್ತಾರೆ. ಕೆಲವರಿಗೆ ರೆಮಿಡಿಸ್ವಿರ್ ಬೇಕಾಗಬಹುದು ಆಗ ಅ ಸೌಲಭ್ಯ ಇಲ್ಲದಿದ್ದರೆ ರೋಗಿಯ ಆಧಾರ್ ಕಾರ್ಡ್, ಕೋವಿಡ್ ಡೆಸ್ಟ್ ರಿಪೋರ್ಟ್, ವೈದ್ಯರ ಪ್ರಮಾಣ ಪತ್ರ ಇದನ್ನು ಪಡೆದು ನೋಡಲ್ ಅಧಿಕಾರಿಗಲ್ಲಿ ಮನವಿ ಮಾಡಲಾಗುತ್ತದೆ. ಅಲ್ಲಿಂದ ವ್ಯವಸ್ಥೆಯಾಗುತ್ತದೆ

ಇವರ ವಾರ್‌ರೂಂಗೆ ಪ್ರತಿದಿನ 300-400 ಕರೆ ಬರುತ್ತದೆ. ಇವರಿಗೆ ಸೂಕ್ತ ಮಾರ್ಗದರ್ಶನ ಮಾಡಲಾಗುತ್ತದೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಬಿ.ವಿ ಶ್ರೀನಿವಾಸ್ ಮಾಡುತ್ತಾರೆ. ಯಾಕೆಂದರೆ ಇದು ರಾಜಕೀಯ ಮಾಡುವ ಸಮಯವಲ್ಲ, ಸಂಕಷ್ಟದಲ್ಲಿರುವವರನ್ನು ರಕ್ಷಿಸುವ ಸಮಯ. ಹಾಗಾಗಿ ಇಲ್ಲಿ ರಾಜಕೀಯ ರಹಿತವಾಗಿ ಕೆಲಸ ಮಾಡುತ್ತಾರೆ ಬಿ.ವಿ ಶ್ರೀನಿವಾಸ್.

ಬಿ.ವಿ ಶ್ರೀನಿವಾಸ್ ಅವರ ವಾರ್‌ರೂಮಿನಲ್ಲಿ 10 ಮಂದಿ ಕೆಲಸ ಮಾಡುತ್ತಾರೆ. ಕೋವಿಡ್ ವಾರಿಯರ್ ಆಗಿ ಕೆಲಸ ಮಾಡುವ ಉತ್ಸಾಹಿ ತರುಣರು ಇಲ್ಲಿದ್ದು ನಿಮಗಾಗಿ ತಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದಾರೆ‌. ಮಕ್ಕಳೂ ಇದ್ದಾರೆ. ಇವರ ಕಾರ್ಯವೈಖರಿಗೆ ಹೆತ್ತವರೂ ಫಿದಾ ಆಗಿದ್ದಾರೆ. ಶಾಲೆ ಇಲ್ಲದಿರುವುದರಿಂದ ಖಾಲಿ ಕುಳಿತು ಸಮಯ ವ್ಯರ್ಥ ಮಾಡುವ ಬದಲು ಇಲ್ಲಿ ತನ್ನ ಅಮೂಲ್ಯ ಸಮಯವನ್ನು ಸದುಪಯೋಗ ಮಾಡುತ್ತಾರೆ. ಪ್ರತಿದಿನ 10 ಸಾವಿರಕ್ಕೂ ಅಧಿಕ ರೆಕ್ವೆಸ್ಟ್ ಬರುತ್ತದೆ‌. ಅನಿವಾರ್ಯ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ ಅನೇಕ ಮಂದಿ ಇಲ್ಲಿಂದ ಸಹಾಯ ಪಡೆದು ಬದುಕಿದವರಿದ್ದಾರೆ‌. ಇದೇ ರೀತಿ ದೇಶಾದ್ಯಂತ ಇವರಿಂದ ನೆರವು ಪಡೆದು ತಮ್ಮ ಅಮೂಲ್ಯ ಜೀವನವನ್ನು ಮರಳಿ ಪಡೆದಿದ್ದಾರೆ.

ಬಿ.ವಿ ಶ್ರೀನಿವಾಸ್ ಮನವಿ; ಇಷ್ಟೆಲ್ಲಾ ಸಹಾಯ ಮಾಡುವ ಬಿ.ವಿ ಶ್ರೀನಿವಾಸ್ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ‌ ಕಾಪಾಡಿ, ಸ್ಯಾನಿಟೈಸರ್ ಬಳಸಿ, ಲಸಿಕೆ ಹಾಕಿಸಿ ಎಂದು ಮನವಿ ಮಾಡುತ್ತಿದ್ದಾರೆ. ಇಷ್ಟೊಂದು ನಿಸ್ವಾರ್ಥವಾಗಿ ಕೆಲಸ ಮಾಡುವ ಬಿ.ವಿ ಶ್ರೀನಿವಾಸ್ ನಿಜಕ್ಕೂ ಪ್ರಚಾರ ಬಯಸದ ಅದ್ಭುತ ವ್ಯಕ್ತಿ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು; ಬಿ.ವಿ ಶ್ರೀನಿವಾಸ್ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ. ಕೊರೊನಾ ಎರಡನೇ ಅಲೆಯ...

ಹೈದರಾಬಾದ್​: ಕೊರೊನಾ ವೈರಸ್​ ಹಾವಳಿ ಹೆಚ್ಚಾಗಿರುವ ಕಾರಣ ಮೇ 2ರಿಂದ ಮೇ.17ರವರೆಗೆ ನಿಗದಿಯಾಗಿದ್ದ...


ನವದೆಹಲಿ: ಕೋವಿಡ್​ ಸೋಂಕಿಗೆ ಒಳಗಾಗಿದ್ದ ದೆಹಲಿ ಸಾಕೆತ್​ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಕೋವಾಯ್...

ನವದೆಹಲಿ: ಹೆಚ್ಚುತ್ತಿರುವ ಕೋವಿಡ್​ ಕೇಸ್​ಗಳನ್ನು ಗಮನದಲ್ಲಿಟ್ಟುಕೊಂಡು ಒಂದು ವಾರದ ಕಾಲ ರಾಷ್ಟ್ರ ರಾಜಧಾನಿಯಲ್ಲಿ...


ದೆಹಲಿ : ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ ಎ...

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)...


ಚೆನ್ನೈ: ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಎಂಬಲ್ಲಿ ಮೂವರು ಸ್ಟೇಟ್‌ ಬ್ಯಾಂಕ್‌ ಆಫ್...

ಸೋಪೋರೆ(ಜಮ್ಮು-ಕಾಶ್ಮೀರ): ಉಗ್ರರ ಜತೆಗಿನ ಎನ್ ಕೌಂಟರ್ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಂದ ಮೂರು ವರ್ಷದ...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!