ಭ್ರಷ್ಟ ಕೂಪದ ದಿವ್ಯ ದರ್ಶನ! DD ಯನ್ನು ಜೈಲಿಗೆ ದಬ್ಬಿದ ಕಮಿಷನರ್ ಶಶಿಕುಮಾರ್ - Karnataka Crime News: Latest Crime Headlines | Police Varthe
Thursday, May 6 , 2021 4:03 PM

ಕ್ರೈಂ












ಭ್ರಷ್ಟ ಕೂಪದ ದಿವ್ಯ ದರ್ಶನ! DD ಯನ್ನು ಜೈಲಿಗೆ ದಬ್ಬಿದ ಕಮಿಷನರ್ ಶಶಿಕುಮಾರ್



1221

ಮಂಗಳೂರು: ಸಹಚರರ ಮೂಲಕ ವ್ಯಕ್ತಿಯೋರ್ವನಿಗೆ ಜೀವಬೆದರಿಕೆವೊಡ್ಡಿ, ರಕ್ಷಣೆ ನೀಡುವ ನೆಪದಲ್ಲಿ ಫ್ಲ್ಯಾಟೊಂದರಲ್ಲಿ ಇರಿಸಿ ೮೫ ಲಕ್ಷ ರೂ. ವಸೂಲಿ ಮಾಡಿರುವ ಆರೋಪದ ಮೇಲೆ ದಿವ್ಯದರ್ಶನ್ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೇರಳದ ಕಡವಂತ ನಗರದ ಮೊಹಮ್ಮದ್ ಹನೀಫ್ ಎಂಬಾತ ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ದಿವ್ಯದರ್ಶನ್ ಎಂಬಾತನನ್ನು ಬಂಧಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, 2019-20 ರ ಸಂದರ್ಭ ಆರೋಪಿ ದಿವ್ಯದರ್ಶನ್ ತನ್ನ ಸಹಚರರ ಮೂಲಕ ಮೊಹಮ್ಮದ್ ಹನೀಫ್‌ಗೆ ಜೀವಬೆದರಿಕೆವೊಡ್ಡಿದ್ದ. ಜೊತೆಗೆ ತಾನೇ ಆತನಿಗೆ ಸಹಕಾರ ನೀಡುವಂತೆ ನಂಬಿಸಿ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಫ್ಲ್ಯಾಟ್‌ನಲ್ಲಿ ಒಂದೆರಡು ತಿಂಗಳುಗಳ ಕಾಲ ಇರಿಸಿದ್ದ. ಬಳಿಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಆಗ ಹನೀಫ್ ಕೇಳಿದಷ್ಟು ಹಣ ನೀಡದಿದ್ದಾಗ ಹಲ್ಲೆ ನಡೆಸಿ, ಶಸ್ತ್ರಾಸ್ತ್ರ ತೋರಿಸಿ ಬೆದರಿಕೆ ಹಾಕಿ ಒಂದು ಬಾರಿ 30 ಲಕ್ಷ ರೂ. ಹಾಗೂ ಮತ್ತೊಂದು ಬಾರಿ 55 ಲಕ್ಷ ರೂ. ಹಣವನ್ನು ವಸೂಲಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ದಿವ್ಯದರ್ಶನ್?ನನ್ನು ಬಂಧಿಸಿದ್ದು, ಆತನ ಸಹಚರರನ್ನು ಶೀಘ್ರದಲ್ಲಿ ಬಂಧಿಸಲಾಗುತ್ತದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಆತ ಮೊಹಮ್ಮದ್ ಹನೀಫ್ನ ತಮ್ಮನ ಹಣಕಾಸಿನ ವ್ಯವಹಾರವನ್ನು ಸರಿಪಡಿಸುತ್ತೇನೆ ಎಂದು ೩೦ ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಈ 30 ಲಕ್ಷ ರೂ. ಸರಿಯಾದ ಸಮಯಕ್ಕೆ ಕೊಡದೆ ಇದ್ದಾಗ ಹನೀಫ್ನಲ್ಲಿದ್ದ ಜಾಗ್ವಾರ್ ಕಾರನ್ನು ತನ್ನ ವಶದಲ್ಲಿರಿಸಿಕೊಂಡಿದ್ದ. ಆ ಬಳಿಕ ಅದನ್ನು ವಾಪಸ್ ಕೊಟ್ಟಿದ್ದಾನೆ. ಆ ಬಳಿಕ ಮೊಹಮ್ಮದ್ ಹನೀಫ್ನನ್ನು ಫ್ಲ್ಯಾಟ್ನಲ್ಲಿ ಇರಿಸಿದ ಸಂದರ್ಭದಲ್ಲಿ ಕೇಳಿದಷ್ಟು ಹಣ ಕೊಟ್ಟಿಲ್ಲ ಎಂದು ಜಾಗ್ವಾರ್ ಕಾರನ್ನು ಮತ್ತೆ ತೆಗೆದುಕೊಂಡು ತಾನು ಉಪಯೋಗಿಸುತ್ತಿದ್ದ. ಬಳಿಕ ಆ ಕಾರಿನ ಲೋನ್ ಕಟ್ಟಿಲ್ಲ ಎಂದು ಸಂಬಂಧಿಸಿದ ಬ್ಯಾಂಕ್ನವರು ಜಾಗ್ವಾರ್ ಕಾರನ್ನು ಸೀಜ್ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದರು.

ಇನ್ನೂ ದಿವ್ಯ ದರ್ಶನ ಎನ್ನುವ ವ್ಯಕ್ತಿಗೆ ಹಿರಿಯ ಅಧಿಕಾರಿಗಳ ಬಹಳ ದೊಡ್ಡ ಮಟ್ಟದಲ್ಲಿ ಸಂಪರ್ಕ ಇತ್ತು. ಈ ಸಂಪರ್ಕವನ್ನು ಬಳಸಿಕೊಂಡು ಈತ ಅನೇಕ ಡೀಲ್ ಗಳನ್ನು ನಡೆಸುತ್ತಿದ್ದ. ತಾನೂ ಏನು ಮಾಡಿದರೂ ನಡೆಯುತ್ತದೆ. ನನಗೆ ಹಿರಿಯ ಅಧಿಕಾರಿಗಳ ಸಂಪರ್ಕ ಇದೆ ಎಂದು ಕಿರಿಯ ಅನೇಕ ಅಧಿಕಾರಿ, ಸಿಬ್ಬಂದಿಗಳಿಗೆ ಬೆದರಿಸುತ್ತಿದ್ದ, ಮಾತ್ರವಲ್ಲದೆ ಅಧಿಕಾರಿ, ಸಿಬ್ಬಂದಿಗಳ ಮಧ್ಯೆ ಸುಳ್ಳು ಮಾಹಿತಿಗಳನ್ನು ನೀಡಿ ಅನೇಕರನ್ನು ನಿಷ್ಠುರ ಮಾಡಿದ ಅನೇಕ ಘಟನೆಗಳು ಇದೆ ಎನ್ನುತ್ತಾರೆ ಒಬ್ಬ ಹಿರಿಯ ಅಧಿಕಾರಿ. ಆದರೆ ಈಗ ಡಿಡಿ ಎಂದೇ ಪರಿಚಿತವಾಗಿದ್ದ ದಿವ್ಯ ದರ್ಶನ್ ಎಂಬ ವ್ಯಕ್ತಿಯ ಇನ್ನೊಂದು ಮುಖವನ್ನು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಸಾರ್ವಜನಿಕವಾಗಿ ದರ್ಶನ ಮಾಡಿಸಿದ್ದಾರೆ. ಶಶಿಕುಮಾರ್ ಮತ್ತು ಅವರ ತಂಡ ನಡೆಸಿದ ಈ ಕಾರ್ಯಚರಣೆಯನ್ನು ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿರುವುದು ತಿಳಿದುಬಂದಿದೆ. ಮತ್ತೊಂದು ಹಂತದಲ್ಲಿ ಈತನ ಜೊತೆಗೆ ಕೆಲ ಹಿರಿಯ ಅಧಿಕಾರಿಗಳು ಡೀಲ್ ನಡೆಸಿದ್ದರು. ಆದರೆ ದಿವ್ಯದರ್ಶನ್‌ನಿಂದಾಗಿ ಅವರಿಗೂ ಅನೇಕ ಕಳಂಕಗಳು ಎದುರಾಗಿದ್ದವು. ನಂತರ ಆತ ಎಲ್ಲಿ ಸಿಕ್ಕಿ ಬೀಳುತ್ತಾನೆ ಎಂದು ಕಾಯುತ್ತಿದ್ದ ಅಧಿಕಾರಿಗಳು. ಇದೀಗ ಡೀಲ್ ಪ್ರಕರಣದಲ್ಲೇ ದಿವ್ಯ ದರ್ಶನ್@ಡಿಡಿ ಬಂಧನವಾಗಿ ಜೈಲು ಸೇರಿರುವ ಕಾರಣ ಈತನ ದಲ್ಲಾಳಿ ಕೆಲಸಕ್ಕೆ ಇನ್ನಾದರೂ ಬ್ರೇಕ್ ಬೀಳಬಹುದು. ಹಾಗೂ ಈತನ ಚಾಡಿ ಬುದ್ದಿಗೆ ಸರಿಯಾಗಿ ಬುದ್ದಿ ಕಲಿಸುವವರು ಇದ್ದಾರೆ ಎಂಬುದನ್ನು ಗೊತ್ತು ಮಾಡಿಸಿರುವುದು ಡಿಡಿ ಗೆ ಸಂಪೂರ್ಣ ಹಿನ್ನಡೆಯಾಗಿದೆ ಎಂದು ವ್ಯಕ್ತಿಯೊಬ್ಬರು ವಿವರಿಸಿದ್ಧಾರೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ...

ಮಂಗಳೂರು; ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮಷಿನ್, ಸಿಸಿಟಿವಿಗಳನ್ನು ಜಖಂ...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್...

ಮಂಗಳೂರು:  ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಇರಿಸಿ ಸರ್ಕಾರದ ನಿಯಮ‌ ಉಲ್ಲಂಘನೆ ಮಾಡಿದ...


ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ...

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ ಯುವ...


ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ...

ಮಂಗಳೂರು; ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!