ಮಂಗಳೂರು ಪೊಲೀಸ್ ಕಮೀಷನರ್ ಮೇಲೆ ಮಾರಣಾಂತಿಕ ಹಲ್ಲೆ ವದಂತಿ!! ನಿಜಕ್ಕೂ ನಡೆದಿದ್ದು ಏನು.?! - Karnataka Crime News: Latest Crime Headlines | Police Varthe
Thursday, May 6 , 2021 3:47 PM

ಕ್ರೈಂ












ಮಂಗಳೂರು ಪೊಲೀಸ್ ಕಮೀಷನರ್ ಮೇಲೆ ಮಾರಣಾಂತಿಕ ಹಲ್ಲೆ ವದಂತಿ!! ನಿಜಕ್ಕೂ ನಡೆದಿದ್ದು ಏನು.?!



634

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ವಿಚಾರಣಾಧೀನ ಕೈದಿಗಳ ನಡುವೆ ನಡೆದ ಹೊಡೆದಾಟ ಮತು ನಂತರ ಜೈಲು ಸಿಬ್ಬಂದಿಗಳ ಮೇಲೆ ಕೈದಿಗಳ ತಂಡವೊಂದು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ. ಜಿಲ್ಲಾ ಕಾರಾಗೃಹದಲ್ಲಿ ಭಾನುವಾರ ಬೆಳಗ್ಗೆ ಎರಡು ತಂಡಗಳ ನಡುವೆ ಹೊಡೆದಾಟ ನಡೆದ ನಂತರ ಜೈಲು ಸಿಬ್ಬಂದಿಗಳ ಮೇಲೆ ಕೈದಿಗಳು ಹಲ್ಲೆಗೆ ಮುಂದಾಗಿದ್ದರು.

ಈ ವೇಳೆ ಇಬ್ಬರು ಜೈಲರ್‌ಗಳು ಮತ್ತು ಜೈಲು ಸಹಾಯಕ ಅಧೀಕ್ಷಕರ ಚಾಲಕನೊಬ್ಬನಿಗೆ ಗಾಯವಾಗಿತ್ತು. ಜೈಲು ಸಹಾಯಕ ಅಧೀಕ್ಷಕರು ಮತ್ತು ಜೈಲರ್‌ಗಳ ತಂಡ ಹೊಡೆದಾಟ ನಡೆಸಿದ ಕೈದಿಗಳನ್ನು ಬೇರೆ ಬೇರೆ ಮಾಡುವ ಉದ್ದೇಶದಿಂದ ಅವರನ್ನು  ಮನವೊಲಿಸಲು ಮುಂದಾದ ವೇಳೆ ಇಬ್ಬರು ಜೈಲರ್ ಮತ್ತು ಚಾಲಕನಿಗೆ ಹಲ್ಲೆ ನಡೆದಿದ್ದು, ಈ ವೇಳೆ ಜೈಲು ಸಹಾಯಕ ಅಧೀಕ್ಷಕ ಚಂದನ್ ಪಟೇಲ್ ಅವರಿಗೆ ಯಾವುದೇ ಗಾಯವಾಗಿಲ್ಲ. ನಂತರ ನಗರದ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಮಾಹಿತಿ ತಿಳಿದು ಜೈಲಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಕಮೀಷನರ್ ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್ ಅವರನ್ನು ಕಂಡ ಹೊಡೆದಾಟ ನಡೆಸಿದ ಒಂದೇ ಬ್ಯಾರಲ್‌ನಲ್ಲಿದ್ದ ಕೈದಿಗಳು ಬೇರೆ ಬೇರೆ ಆಗಲು ಒಪ್ಪದೇ ಜೋರಾಗಿ ಬೊಬ್ಬೆ ಹಾಕಿದ್ದಾರೆ. ಈ ವೇಳೆ ಪೊಲೀಸ್ ಕಮೀಷನರ್ ಅವರು ಖಡಕ್ ಆಗಿ ಕೈದಿಗಳಿಗೆ ಹೊರ ಬರುವಂತೆ ಎಚ್ಚರಿಕೆ ಕೊಟ್ಟಿದ್ದಾರೆ. ನಂತರ ಸಂಜೆ ವೇಳೆಗೆ ಹೊಡೆದಾಟ ನಡೆಸಿದ ಬ್ಯಾರಲ್‌ನಲ್ಲಿದ್ದ ಕೈದಿಗಳನ್ನು ಶಿವಮೊಗ್ಗ ಹಾಗೂ ಧಾರಾವಾಡದ ಜೈಲುಗಳಿಗೆ ವರ್ಗವಾಣೆ ಮಾಡಲಾಗಿದೆ. ಜೈಲಿನಿಂದ ಹೊರ ಬಂದ ಕಮೀಷನರ್ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದ್ದರು. ಆದರೆ ಇಂದು ಬೆಳ್ಳಿಗ್ಗೆ ಸುಳ್ಳು ಸುದ್ದಿಯೊಂದು ಹರಿದಾಡಿತ್ತು.

ಆದರೆ ಈ ಸುದ್ದಿಯ ಬಗ್ಗೆ ಪೊಲೀಸ್ ಕಮೀಷನರ್ ಶಶಿಕುಮಾರ್ ಹಾಗೂ ಜೈಲು ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಅವರು POLICEVARTHE.COMಗೆ ಸ್ಪಷ್ಟನೆ ನೀಡಿದ್ದು, ನಮ್ಮ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ ಮತ್ತು ಹೊಡೆದಾಟ ನಡೆಸಿದ ಕೈದಿಗಳನ್ನು ಬೇರೆ ಬೇರೆ ಮಾಡಲು ಹೋದ ವೇಳೆ ಜೈಲಿನ ಇಬ್ಬರು ಜೈಲರ್ ಮತ್ತು ಒಬ್ಬ ಚಾಲಕನಿಗೆ ಗಾಯವಾಗಿದ್ದು ಬಿಟ್ಟು. ನಮಗೆ ಯಾವುದೇ ಸಣ್ಣಪುಟ್ಟ ಗಾಯಗಳು ಕೂಡ ಆಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ...

ಮಂಗಳೂರು; ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮಷಿನ್, ಸಿಸಿಟಿವಿಗಳನ್ನು ಜಖಂ...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್...

ಮಂಗಳೂರು:  ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಇರಿಸಿ ಸರ್ಕಾರದ ನಿಯಮ‌ ಉಲ್ಲಂಘನೆ ಮಾಡಿದ...


ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ...

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ ಯುವ...


ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ...

ಮಂಗಳೂರು; ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!