ಪರೀಕ್ಷೆ ಮುಂದೂಡಲು ಅವಹೇಳಕಾರಿ ಗೋಡೆ ಬರಹ! ಇಬ್ಬರು ಅಪ್ರಾಪ್ತರು ಕದ್ರಿ ಪೊಲೀಸ್ ವಶಕ್ಕೆ - Karnataka Crime News: Latest Crime Headlines | Police Varthe
Thursday, May 6 , 2021 4:01 PM

ಕ್ರೈಂ












ಪರೀಕ್ಷೆ ಮುಂದೂಡಲು ಅವಹೇಳಕಾರಿ ಗೋಡೆ ಬರಹ! ಇಬ್ಬರು ಅಪ್ರಾಪ್ತರು ಕದ್ರಿ ಪೊಲೀಸ್ ವಶಕ್ಕೆ



204

ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಗೋಡೆ ಬರಹ ಬರೆದ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳಾದ ಈ ಇಬ್ಬರು ಅಪ್ರಾಪ್ತರು ಪರೀಕ್ಷೆ ಮುಂದೂಡಬೇಕೆಂಬ ಆಕಾಂಕ್ಷೆಯಿಂದ ದುರುದ್ದೇಶಪೂರಕವಾಗಿ ಪಂಪ್ ವೆಲ್‌ನ ಕರ್ಣಾಟಕ ಬ್ಯಾಂಕ್ ಪ್ರಧಾನ ಕಚೇರಿ ಮುಂಭಾಗದ ಪ್ಲೈಓವರ್ ಗೋಡೆಯ ಮೇಲೆ ಹಾಗೂ ನಗರದ ಹಲವು ಕಡೆಗಳಲ್ಲಿ ಮತ್ತು ಕೆಲವು ಕಡೆ ರಸ್ತೆಯಲ್ಲಿ ಕೂಡ ಲಾಕ್ ಡೌನ್ ಆಗಬೇಕೆಂದು ಬರೆದಿದ್ದರು. ಅಲ್ಲದೆ ಜೊತೆಗೆ ಅವಹೇಳಕಾರಿಯಾಗಿಯೂ ಬರೆದುಕೊಂಡಿದ್ದರು.

ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕದ್ರಿ ಪೊಲೀಸರಿಗೆ ಈ ಪ್ರಕರಣ ಸವಾಲಗಿತ್ತು. ತನಿಖೆ ಕೈಗೆತ್ತಿಕೊಂಡ ಕದ್ರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸವಿತ್ರತೇಜ್ ನೇತೃತ್ವದ ಪೊಲೀಸರ ತಂಡ ಅನೇಕ ಆಯಾಮಗಳಲ್ಲಿ ತನಿಖೆ ನಡೆಸಿ, ಹಲವಾರು ಶಂಕಿತ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದರು. ನಂತರ ವಿಶೇಷ ಮಾಹಿತಿಯೊಂದನ್ನು ಆಧಾರಿಸಿ ಕದ್ರಿ ಪೊಲೀಸರು ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸಿಸಿಟಿವಿಯಲ್ಲಿ ದೊರೆತ ದೃಶ್ಯದಲ್ಲಿ ವಶಕ್ಕೆ ಪಡೆದಿದ್ದ ಬಾಲಕರೇ ಕೃತ್ಯ ಎಸೆಗಿರುವುದು ತಿಳಿದುಬಂದಿದ್ದು, ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ಈ ಅಪ್ರಾಪ್ತ ಇಬ್ಬರು ಬಾಲಕರನ್ನು ಬಂಧಿಸಿದ್ದಾರೆ. ಕಾರ್ಯಚರಣೆಯಲ್ಲಿ ಕದ್ರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸವಿತ್ರತೇಜ್ ನೇತೃತ್ವದ ಪೊಲೀಸರು ಭಾಗವಹಿಸಿದ್ದರು.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ...

ಮಂಗಳೂರು; ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮಷಿನ್, ಸಿಸಿಟಿವಿಗಳನ್ನು ಜಖಂ...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್...

ಮಂಗಳೂರು:  ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಇರಿಸಿ ಸರ್ಕಾರದ ನಿಯಮ‌ ಉಲ್ಲಂಘನೆ ಮಾಡಿದ...


ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ...

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ ಯುವ...


ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ...

ಮಂಗಳೂರು; ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!