ಖಡಕ್ ಜೈಲು ಅಧಿಕಾರಿಯ ವಿರುದ್ಧ ಅಪಪ್ರಚಾರದ ಷಡ್ಯಂತ್ರ! ಯುವ ಅಧಿಕಾರಿ "ಚಂದನ್" ಜೈಲನ್ನು ಚಂದಕಾಣಿಸಿದ್ದೇ ದುಷ್ಟ ಕೂಟಕ್ಕೆ ಕಣ್ಣುರಿ - Karnataka Crime News: Latest Crime Headlines | Police Varthe
Thursday, May 6 , 2021 2:57 PM

ಕ್ರೈಂ












ಖಡಕ್ ಜೈಲು ಅಧಿಕಾರಿಯ ವಿರುದ್ಧ ಅಪಪ್ರಚಾರದ ಷಡ್ಯಂತ್ರ! ಯುವ ಅಧಿಕಾರಿ “ಚಂದನ್” ಜೈಲನ್ನು ಚಂದಕಾಣಿಸಿದ್ದೇ ದುಷ್ಟ ಕೂಟಕ್ಕೆ ಕಣ್ಣುರಿ



462

Posted By: Ranjith Madanthyar

ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಮಂಗಳೂರು ಜೈಲಿನಲ್ಲಿ ನಡೆದ ಡಬ್ಬಲ್ ಮರ್ಡರ್ ಭೀಕರ ಹತ್ಯೆಯ ಬಳಿಕ ಜೈಲು ರೌಡಿಗಳನ್ನು ಮಟ್ಟ ಹಾಕಲೆಂದೇ ಮಂಗಳೂರಿಗೆ ಆಗಮಿಸಿದ ಜೈಲ್ ಸುಪರಿಂಡೆಂಟ್. ರೌಡಿಗಳ ಹುಟ್ಟಡಗಿಸಿದ ಬಳಿಕ ಪಾತಕಿಗಳ ಹೊಟ್ಟೆಯಲ್ಲಿ ಚಳಿ ಕೂರಿಸಿರುವ ಯುವ ಅಧಿಕಾರಿಯನ್ನು ವರ್ಗಾಯಿಸಲೇಬೇಕು ಎಂಬ ಷಡ್ಯಂತ್ರ ರಚಿಸಿರುವ ದುಷ್ಟ ಕೂಟ ಈಗ ಅಪಪ್ರಚಾರಕ್ಕೆ ಟೊಂಕ ಕಟ್ಟಿ ನಿಂತಿದೆ. ಜೈಲಿನಲ್ಲಿ ನಡೆದ ಹೊಡೆದಾಟದ ನಂತರ ಜಾಲತಾಣ ದಲ್ಲಿ ನಡೆಯುತ್ತಿರುವ ಅಪಪ್ರಚಾರ ದ ಹಿನ್ನೆಲೆಯಲ್ಲಿ ಸತ್ಯಾ ಸತ್ಯತೆಯ ವಸ್ತು ನಿಷ್ಠ ಅವಲೋಕನ ನಿಮಗಾಗಿ.  

ಜೈಲಿನ ಕರಾಳ ಇತಿಹಾಸ: ಮಂಗಳೂರು ಜೈಲು ಕರ್ನಾಟಕದಲ್ಲೇ ಅತ್ಯಂತ ಟಫ್ ಎನಿಸಿರುವ ಜೈಲು, ಕಾರಾಗೃಹ ಇಲಾಖೆಯ ಅಧಿಕಾರಿಗಳನ್ನು ಮಂಗಳೂರಿಗೆ ವರ್ಗಾವಣೆ ಮಾಡಿದ್ದಾರೆ ಅಂದರೆ ಅದೊಂದು ಪನಿಶ್ ಮೆ೦ಟ್ ಪೋಸ್ಟಿಂಗ್ ಅನ್ನುವ ಮಾತಿದೆ.
ಜೈಲಿನಲ್ಲಿ ಡಬಲ್ ಮರ್ಡರ್ ನಡೆದ ನಂತರವಂತೂ ಎಂಟೆದೆಯ ಆಫಿಸರ್ ಕೂಡಾ ಮಂಗಳೂರಿಗೆ ಬರಲು ಎರಡು ಬಾರಿ ಯೋಚನೆ ಮಾಡುತ್ತಿದ್ದರು. ಹೀಗಿರುವಾಗ ಟ್ರೈನಿಂಗ್ ಅಕಾಡೆಮಿಯಿಂದ ನೇರವಾಗಿ ಮಂಗಳೂರಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾಗಿ ಬಂದು (ಪ್ರಭಾರ) ಜೈಲು ಎಸ್ಪಿ ಹುದ್ದೆಯ ಮಹತ್ವದ ಜವಾಬ್ಧಾರಿಯನ್ನು ಹೊತ್ತಿದ್ದೇ ಚಂದನ್ ಪಟೇಲ್ ಎನ್ನುವ ಯುವ ಅಧಿಕಾರಿ. ಅಧಿಕಾರ ಸ್ವೀಕರಿಸಿದ ನಂತರ ಮಾಡಿದ ಬದಲಾವಣೆ ಅಚ್ಚರಿ ಹುಟ್ಟಿಸುವಂತೆ ಮಾಡಿತ್ತು. ಕಾರಾಗೃಹ ಇಲಾಖೆಯ ಆಗಿನ ಡಿಜಿ ಆಗಿದ್ದ ಮೇಘರಿಕ್ ಎನ್ನುವ ಹಿರಿಯ ಐ.ಪಿ.ಎಸ್ ಅಧಿಕಾರಿಯು ಅತ್ಯಂತ ನಂಬಿಕೆಯಿಂದ ಈ ಯುವಕನನ್ನು ಬದಲಾವಣೆ ತರಲೆಂದೇ ಕಳುಹಿಸಿಕೊಟ್ಟಿದ್ದರು ಮಾತ್ರವಲ್ಲದೇ ಈ ಬಗ್ಗೆ ಅವರು ಆಪ್ತರಲ್ಲಿ ಹೇಳಿಕೊಂಡಿದ್ದರು ಕೂಡ.

ಚಂದನ್ ಪಟೇಲ್ ಎನ್ನುವ ಯುವ ಅಧಿಕಾರಿ ಈ ಹುದ್ದೆಗೆ ಬರುವ ಮೊದಲು ಮಂಗಳೂರಿನ ಈ ಜೈಲು ಹೇಗೆ ಇತ್ತು ಎಂಬುದು ಎಲ್ಲರಿಗೂ ತಿಳಿದಿದೆ. ದಿನನಿತ್ಯ ಪತ್ರಿಕೆಗಳಲ್ಲಿ ಒಂದಲ್ಲಾ ಒಂದು ಸುದ್ದಿಯ ಮೂಲಕ ಕುಖ್ಯಾತವಾಗಿತ್ತು. ಜೈಲಿನಲ್ಲಿ ಅಕ್ರಮ ಚಟುವಟಿಕೆ, ಜೈಲು ಅಧಿಕಾರಿಗಳ ಲಂಚಾವತಾರದ ಬಗ್ಗೆ ದೂರುಗಳ ಸುರಿ ಮಳೆಯೇ ಇದ್ದವು. ಜೈಲಿನಲ್ಲಿ ಮೊದಲೆಲ್ಲ ಪ್ರತಿಯೊಂದಕ್ಕೂ ಲಂಚ ಎನ್ನುವ ಸ್ಥಿತಿಯಿತ್ತು. ಹಣ ಕೊಟ್ಟರೆ ಎಲ್ಲವು ಸಿಗಬಹುದು ಎನ್ನುವ ಮಾತುಗಳಿತ್ತು. ಆರೋಪಿ ಹಣ ಚೆಲ್ಲಿದರೆ ಜೈಲಿಂದ ನೇರ ಆಸ್ಪತ್ರೆಗೆ ಹೋಗಿ ಕಾಲ ಕಳೆಯಬಹುದಾಗಿತ್ತು. ಜೈಲ್ ನ ಒಳಗೆ ಶ್ರೀಮಂತರು ಬಡವರು ಎನ್ನುವ ತಾರತಮ್ಯ ಇತ್ತು. ಆದರೆ ಈ ಖಡಕ್ ಅಧಿಕಾರಿ ಅಂದಿನ ಚಿತ್ರಣವನ್ನೇ ಬದಲಾಯಿಸಿ ಬಿಟ್ಟರು. ಎಲ್ಲ ಕೈದಿಗಳಿಗೂ ಒಂದೇ ಟ್ರೀಟ್ ಮೆಂಟ್, ಜೈಲಿನಲ್ಲಿ ಡ್ರಗ್ಸ್, ಲಂಚ ಮುಕ್ತವಾಗಿತ್ತು. ಗಲಾಟೆಗಳಿಗೆ ಕುಖ್ಯಾತಿ ಪಡೆದಿದ್ದ ಮಂಗಳೂರು ಜೈಲ್ ಸುಧೀರ್ಘ ಸಮಯದ ತನಕ ಶಾಂತಿಯುತವಾಗಿ ನಡೆಸಿದ ಖ್ಯಾತಿ ಚಂದನ್ ಪಟೇಲ್ ಗೆ ಸಲ್ಲಲೇ ಬೇಕು. ಆದರೆ ಕೆಲದಿನಗಳ ಹಿಂದೆ ಜೈಲಿನಲ್ಲಿ ಒಬ್ಬ ಕುಖ್ಯಾತ ಆರೋಪಿಯೂ ಹೊಡೆದಾಟ ನಡೆಸಿ ನಂತರ ಜೈಲಿನ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ. ಈ ಘಟನೆ ಹೇಗೆ ನಡೆಯಿತ್ತು. ಏನು ಆಯಿತು ಎಂದು ಚಂದನ್ ಪಟೇಲ್ ಅವರು ತನ್ನ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. 

ಘಟನೆಯ ಬಳಿಕ ಜೈಲು ಸಹಾಯಕ ಅಧೀಕ್ಷಕ ಚಂದನ್ ಬಗ್ಗೆ ಬಹಳದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಿದರು. ಕೆಲ ಕೀಡಿಗೇಡಿಗಳು. ಚಂದನ್ ಮುಸ್ಲಿಮರಿಂದ ಹಣ ಪಡೆದುಕೊಂಡು ಜೈಲ್‌ನಲ್ಲಿ ಮುಸ್ಲಿಮರಿಗೆ ಅನುಕೂಲವಾಗುವಂತೆ ನಡೆಸುತ್ತಿದ್ದಾರೆ ಎನ್ನುವ ಕಪೋಲ ಕಲ್ಪಿತ ಸುದ್ದಿ ಹಬ್ಬಿಸಿ, ಚಂದನ್ ಅವರನ್ನು ಹಿಂದೂ ವಿರೋಧಿ ಎನ್ನುವ ದುರಭಿಪ್ರಾಯ ಮೂಡಿಸುವ ಷಡ್ಯಂತ್ರ ನಡೆಯಿತು. ಕಾನೂನು ಮತ್ತು ಜೈಲಿನ ನಿಯಮಗಳಿಗೆ ಅನುಸಾರವಾಗಿ ನಿಷ್ ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದ ಅಧಿಕಾರಿಗೆ ದುಷ್ಟ ಕೂಟ ಇಂತಹ ಪಟ್ಟ ಕಟ್ಟಿತ್ತು. ಮೊದಲೆಲ್ಲ ರಾಜಕಾರಣಿಗಳು, ಶ್ರೀಮಂತರು ಕರೆ ಮಾಡಿ ಈ ಕೈದಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದೆಲ್ಲಾ ಜೈಲಿನ ಅಧಿಕಾರಿಗಳಿಗೆ ಲಂಚ ಕೊಟ್ಟು ಡೀಲ್ ಮಾಡಲಾಗುತ್ತಿತ್ತು. ಆದರೆ ಈಗ ಅದ್ಯಾವುದನ್ನೂ ಈ ಅಧಿಕಾರಿ ಪರಿಗಣಿಸದೆ ಇರುವುದು ಮತ್ತು ಕೈದಿಗಳ ಯೋಗ ಕ್ಷೇಮಕ್ಕೆ ಪೂರಕವಾಗಿ ನಿಯಮಾನುಸಾರ ನಿರ್ಧಾರ ಮಾಡುತ್ತಿದ್ದರು. ಜೈಲ್ ಮತ್ತು ಪೊಲೀಸ್ ಇಲಾಖೆಯ ಈ ಬಗ್ಗೆ ತಿಳಿದವರಿಗೆ ಗೊತ್ತಿದೆ.

ಕೈದಿಯಾಗಿ ಬಂದವನನ್ನು ಜಾತಿ, ಧರ್ಮ ನೋಡದೆ ಆತನ ಪರಿವರ್ತನೆಗೆ ಪ್ರಯತ್ನ ಮಾಡುತ್ತಿದ್ದ ಒಬ್ಬ ನಿಷ್ಠಾವಂತ ಅಧಿಕಾರಿಯನ್ನು ಸುಳ್ಳು ಆರೋಪ ಮಾಡಿ ಮಂಗಳೂರು ಜೈಲಿನಿಂದ ವರ್ಗಾವಣೆ ಮಾಡಲು ಕಾಣದ ಕೈಗಳು ಷಡ್ಯಂತ್ರ ನಡೆಸಿವೆ. ಹೊರಗಡೆ ಕೋಮು ಗಲಭೆ ಅಥವಾ ಇನ್ಯಾವುದೇ ದೊಡ್ಡ ಗಲಾಟೆಗಳು ನಡೆದಾಗ ಜೈಲ್‌ನಲ್ಲಿ ಗಲಾಟೆ ಸಾಮಾನ್ಯವಾಗಿತ್ತು. ಈಗ ಅಂತಹ ಘಟನೆಗಳಿಗೆ ಅವಕಾಶವೇ ಇಲ್ಲದಂತೆ ಕಾರಾಗೃಹವನ್ನು ಹದ್ದು ಬಸ್ತಿನಲ್ಲಿಟ್ಟ ಈ ಯುವ ಅಧಿಕಾರಿ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕ್ರಿಮಿನಲ್‌ಗಳೇ ತುಂಬಿ ಹೋಗಿರುವ ಜೈಲಿನಲ್ಲಿ ಕೆಲವೊಮ್ಮೆ ಗಲಾಟೆ, ಹೊಡೆದಾಟ, ಬಡಿದಾಟ ಸಾಮಾನ್ಯ
ಅಂತಹ ಘಟನೆ ನಡೆದ ಸಮಯದಲ್ಲಿ ಕೂಡ ಸಮರ್ಥವಾಗಿ ನಿಭಾಯಿಸಿ ಕಾರಾಗೃಹ ಇಲಾಖೆ ಮತ್ತು ಮಂಗಳೂರಿನ ಪೊಲೀಸ್ ಇಲಾಖಾ ಅಧಿಕಾರಿಗಳಿಂದ ಮೆಚ್ಚುಗೆಗಳಿಸಿರುವ ಕೀರ್ತಿ ಚಂದನ್‌ರದ್ದು. 

 “ಮುಖ್ಯಮಂತ್ರಿ ಪದಕ “: ಕೊನೆಯದಾಗಿ ಸರಕಾರೀ ಇಲಾಖೆಗಳಲ್ಲಿ “ಮುಖ್ಯಮಂತ್ರಿ ಪದಕ ” ಅನ್ನುವುದು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ. ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿಕೊಂಡು ಸೂಕ್ತರಾದವರನ್ನು ಆಯ್ಕೆ ಮಾಡುತ್ತಾರೆ. ಈ ಆಯ್ಕೆಯನ್ನು ಮಾಡುವಾಗ ಅಧಿಕಾರಿಯ ಸಂಪೂರ್ಣ ಜಾತಕ, ಇತಿಹಾಸ ಜಾಲಾಡುತ್ತಾರೆ. ಅವರ ನಿಷ್ಕಳಂಕ ಟ್ರ್ಯಾಕ್ ರೆಕಾರ್ಡ್ ಇದ್ದವರಾದರೆ ಮಾತ್ರ ಪದಕ ಪಡೆಯಲು ಅರ್ಹರಾಗಿರುತ್ತಾರೆ.
ಇಲಾಖೆಯನ್ನು ಸೇರಿದ ಮೂರೇ ವರ್ಷದಲ್ಲಿ ಒಬ್ಬ ಅಧಿಕಾರಿ ಪದಕ ಪಡೆಯುತ್ತಿರುವುದು ಇದೆ ಮೊದಲು. ಇತ್ತೀಚೆಗೆ ಗಲಾಟೆ ನಡೆಸಿದ್ದ ಮುಸ್ಲಿಂ ಕೈದಿಗಳನ್ನು ನಿರ್ದಾಕ್ಷಿಣ್ಯವಾಗಿ ಹತ್ತಿಕ್ಕಿ ಬೇರೆ ಜೈಲ್‌ಗಳಿಗೆ ಟ್ರಾನ್ಸ್ ಫರ್ ಮಾಡಿದ್ದು ಇವರ ಕಾರ್ಯ ವೈಖರಿಗೆ ಸಾಕ್ಷಿ. ಇವರನ್ನು ಮುಸಲ್ಮಾನರ ಪರ, ಹಿಂದುಗಳ ಪರ ಎಂಬುದಾಗೆಲ್ಲ ಬಿಂಬಿಸಿ ಕೋಮು ಕಾರ್ಡ್ ಬಳಸಿ ಯಾರೋ ಸಂದರ್ಭದ ಲಾಭ ಪಡೆಯಲು ಯತ್ನಿಸುತ್ತಿರುವುದು ಕಂಡು ಬಂದಿದೆ. ಆದರೆ ಹಿರಿಯ ಅಧಿಕಾರಿಗಳು ಇಂಥ ತಳ್ಳಿ ಅರ್ಜಿಗಳನ್ನು ಸದ್ಯಕ್ಕೆ ತಳ್ಳಿ ಹಾಕಲು ನಿರ್ಧರಿಸಿದ್ದಾರೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಮಂಗಳೂರು: ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸಿ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ...

ಮಂಗಳೂರು; ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಎಟಿಎಂ ಮಷಿನ್, ಸಿಸಿಟಿವಿಗಳನ್ನು ಜಖಂ...


ಮಂಗಳೂರು: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಮಂಗಳೂರು ಪೂರ್ವ ಪೊಲೀಸ್...

ಮಂಗಳೂರು:  ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಇರಿಸಿ ಸರ್ಕಾರದ ನಿಯಮ‌ ಉಲ್ಲಂಘನೆ ಮಾಡಿದ...


ಮಂಗಳೂರು: ಇಲ್ಲಿನ ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕರಾದ ಚಂದನ್ ಪಟೇಲ್ ಮತ್ತೆ...

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೇರಳ ಮೂಲದ ಯುವ...


ಮಂಗಳೂರು: ನಗರದ ಪಂಪ್ ವೆಲ್ ಫ್ಲೈಓವರ್ ಗೋಡೆಯ ಮೇಲೆ ಸೇರಿದಂತೆ ನಗರದ...

ಮಂಗಳೂರು; ಜಿಲ್ಲೆಯ ಉಪ್ಪಿನಂಗಡಿ ಪೇಟೆಯಲ್ಲಿರುವ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಇಂದು...


Editor in Chief - Ranjith Madanthyar
PoliceVarthe.Com , Crime News website Karnataka. Copyright 2020 poicevarthe.com | All Right Reserved
error: Content is protected !!