Tuesday, August 11 , 2020 3:31 AM

ಕ್ರೈಂ












ಮಂಗಳೂರಿನ ನಾಲ್ವರು ಸಿಸಿಬಿ ಪೊಲೀಸರಿಗೆ ಕೋವಿಡ್19 ಸೋಂಕು ದೃಢ



116

ಮಂಗಳೂರು: ಕೇಂದ್ರ ಅಪರಾಧ ದಳದ ಮಂಗಳೂರು ವಿಭಾಗದ ನಾಲ್ವರು ಪೊಲೀಸ್ ಅಧಿಕಾರಿಗಳಿಗೆ ಕೋವಿಡ್-19 ಸೋಂಕು ದೃಢವಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿಇದುವರೆಗೆ ಓರ್ವ ಎಸಿಪಿ ದರ್ಜೆಯ ಅಧಿಕಾರಿ ಸೇರಿ 18 ಮಂದಿ ಪೊಲೀಸರಿಗೆ ಕೋವಿಡ್ 19 ಸೋಂಕು ತಾಗಿದೆ. ಅದರಲ್ಲೂ ಉಳ್ಳಾಲ ಠಾಣೆಯಲ್ಲಿ 12 ಮಂದಿಗೆ ಸೋಂಕು ದೃಢವಾಗಿದೆ.

ಶುಕ್ರವಾರ ನಾಲ್ವರು ಸಿಸಿಬಿ ಪೊಲೀಸರಿಗೆ ಮಂಗಳೂರಿನಲ್ಲಿ ಸೋಂಕು ದೃಢವಾಗಿದೆ.ಕೋವಿಡ್ 19 ಸೋಂಕು ದೃಢವಾದ ಎಲ್ಲಾ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಮತ್ತು ಅವರ ಕುಟುಂಬಿಕರಿಗೆ ಸಾಕಷ್ಟು ರಕ್ಷಣೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ -19 ಸೋಂಕಿತರ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಗುರುವಾರ ಜಿಲ್ಲೆಯಲ್ಲಿ 90 ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಜಿಲ್ಲೆಯ ಶಾಸಕರೊಬ್ಬರು ಕೂಡಾ ಸೋಂಕಿಗೆ ಒಳಗಾಗಿದ್ದರು. ಗುರುವಾರ ಅಂತ್ಯಕ್ಕೆ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 923ಕ್ಕೆ ತಲುಪಿದೆ.

ಕ್ಷಣ ಕ್ಷಣದ ಕ್ರೈಮ್ ಸುದ್ದಿಗಾಗಿ POLICEVARTHE.COM ವೆಬ್ ಸೈಟ್ ಕ್ಲಿಕ್ ಮಾಡಿ, ವಿಕ್ಷೀಸಿ

ಆತ್ಮೀಯ Policevarthe.com ಓದುಗರೇ ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅಪರಾಧ( ಕ್ರೈಮ್) ಸುದ್ದಿಗಳನ್ನು ತಕ್ಷಣವೇ ನಮಗೆ ಕಳುಹಿಸಿ, ನಿಮ್ಮ ಸುದ್ದಿಯನ್ನು ನಾವು ಪ್ರಕಟಿಸುತ್ತೇವೆ.

9741089956

Ranjith Madanthyar
Owner & Chief Editor Policevarthe.com Crime Website

More

ಬೆಂಗಳೂರು: ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸ್‌ ಸಂಬಂಧಿವೋರ್ವ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್​...

ಬೆಂಗಳೂರು: ಕಾಂಗ್ರೆಸ್​ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಕಾವಲ್​ ಭೈರ್​ಸಂದ್ರ ಮನೆ, ಕಚೇರಿ...


ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಧಾರ್ಮಿಕ ಅವಹೇಳನ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ...

ಬಂಟ್ವಾಳ: ಮೂರು ವರ್ಷಗಳ ಹಿಂದೆ ನಡೆದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ...


ಮಂಗಳೂರು: ನೂತನ ಉಪಪೊಲೀಸ್ ಆಯುಕ್ತರಾಗಿ ವಿನಯ್ ಗಾಂವ್ಕರ್ ಅವರನ್ನು ನಿಯುಕ್ತಿಗೊಳಿಸಿ ರಾಜ್ಯ...

ಕೊಡಗು: ಜಿಲ್ಲೆಯ ಪ್ರಸಿದ್ದ ಕಾವೇರಿ ತೀರ್ಥಕ್ಷೇತ್ರ ತಲಕಾವೇರಿಯಲ್ಲಿ ಭಾರಿ ಪ್ರಮಾಣದ ಭೂಕುಸಿತ...


ಕೊಡಗು: ಬ್ರಹ್ಮಗಿರಿ ಬೆಟ್ಟ ಕುಸಿದು ಅರ್ಚಕರ ಕುಟುಂಬಗಳು ಕಣ್ಮರೆಯಾಗಿರುವ ಪ್ರದೇಶಕ್ಕೆ ರಕ್ಷಣಾ ತಂಡಗಳು...

ಮಂಗಳೂರು; ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ದಕ್ಷ, ಪ್ರಾಮಾಣಿಕ ಅಧಿಕಾರಿ...


Copyright 2019 www.policevarthe.com | All Right Reserved
error: Content is protected !!