ಹಾಸನ: ಪ್ರಜ್ವಲ್ ರೇವಣ್ಣರನ್ನು ಹೋಲುವ
ಖಾಸಗಿ ವಿಡಿಯೋ ಪ್ರಕರಣದ ಕುರಿತು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ವಿಡಿಯೋಗಳನ್ನು ಪೆನ್‌ಡ್ರೈವ್‌ನಲ್ಲಿ ಹಾಕಿ ಹಾಸನದ ಹಾದಿ ಬೀದಿಗಳಲ್ಲಿ ಚೆಲ್ಲಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದು ಕಾಂಗ್ರೆಸ್ – ಜೆಡಿಎಸ್ ಮಧ್ಯೆ ರಾಜಕೀಯ ವೈಷಮ್ಯಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ನಾಯಕರು ಈ ವಿಚಾರ ಹಿಡಿದು ಜೆಡಿಎಸ್ ನಾಯಕರ ವಿರುದ್ಧ, ತೀವ್ರ ವಾಗ್ದಾಳಿ ನಡೆಸಿದ್ದಾರೆ ಅಲ್ಲದೆ ಸಂತ್ರಸ್ತ ಮಹಿಳೆಯರು ಈ ಕುರಿತು ದೂರು ನೀಡಿ ಕಾನೂನು ಹೋರಾಟಕ್ಕೂ ಮುಂದಾಗಿದ್ದರು ಆದರೆ ಕೊನೆ ಹಂತದಲ್ಲಿ ಅವರನ್ನು ದೂರು ನೀಡಲಿಲ್ಲ ಎಂದು ಹೇಳಲಾಗುತ್ತಿದೆ.ಇದೇ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಕೇಸ್‌ಗೆ ಸ್ಫೋಟಕ ತಿರುವು ಸಿಕ್ಕಿದೆ.
ಏನದು ಸ್ಫೋಟಕ ತಿರುವು? ; ಹಾಸನದ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿರುವುದು ಅಂತ ಹೇಳಲಾಗುತ್ತಿರುವ ಖಾಸಗಿ ವಿಡಿಯೋ 21/04/2024 ರ ಸಂಜೆ, ಪೆನ್ ಡ್ರೈವ್ ಹಾಗೂ ಸಿಡಿಗಳ ಮೂಲಕ ವೀಡಿಯೋ ವೈರಲ್ ಆಗಿತ್ತು. ಈ ವಿಚಾರ ಇದೀಗ ದೊಡ್ಡ ತಿರುವು ಪಡೆದಿದ್ದು, 23/04/2024 ರಂದೇ ಸೈಬರ್ ಕ್ರೈಂ ಠಾಣೆಗೆ ವಕೀಲರೊಬ್ಬರು ಈ ಬಗ್ಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಪ್ರಜ್ವಲ್ ರೇವಣ್ಣ ಹಾಸನ ಕ್ಷೇತ್ರದ ಎನ್‌ಡಿಎ ಮೈತ್ರಿ ಅಭ್ಯರ್ಥಿ ಆಗಿದ್ದಾರೆ ಆದರೆ ಚುನಾವಣೆಯಲ್ಲಿ, ಪ್ರಜ್ವಲ್ ಸೋಲಿಸಲು ಈ ರೀತಿಯಾಗಿ ಅವರ ಮುಖ ಮಾರ್ಫ್ ಪೋಟೋ ವಿಡಿಯೋ ಮಾಡಿ ಮತದಾರರಿಗೆ ಹಂಚಿಕೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿ ದೂರು ನೀಡಲಾಗಿತ್ತು. ಹಾಗೇ ಅಪಪ್ರಚಾರ ಮಾಡಿ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನ ಸೋಲಿಸೋದಕ್ಕೆ ಪ್ರಯತ್ನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿತ್ತು. ಬೇಲೂರು ತಾಲೂಕು ಅರೇಹಳ್ಳಿ ಮೂಲದ ವ್ಯಕ್ತಿ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಈ ವಿಚಾರ ಸಂಚಲನ ಸೃಷ್ಟಿಸುತ್ತಿದ್ದು ಪ್ರಕರಣ ರಾಜಕೀಯ ತಿರುವನ್ನು ಕೂಡ ಪಡೆಯುತ್ತಿದೆ.