ಹಾಸನ; ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣನದ್ದು ಎನ್ನಲಾದ ಸೆಕ್ಸ್ ಪೆನ್ ಡ್ರೈವ್ ಗಳ ಬಹಿರಂಗ ಮಾಡುವ ಹಿಂದೆ ಬಿಜೆಪಿ ಮುಖಂಡ,ಮಾಜಿ ಶಾಸಕನೋರ್ವನ ಕೈವಾಡ ಇದೆ ಎಂಬ ಗುಮಾನಿ ಜೆಡಿಎಸ್ ಕಾರ್ಯಕರ್ತರಲ್ಲಿ ಮೂಡಿದೆ. ಹಾಸನ ಭಾಗದಲ್ಲಿ ಜೆಡಿಎಸ್ ಸಾಮ್ರಾಜ್ಯಕ್ಕೆ ದೊಡ್ಡ ಪೆಟ್ಟು ನೀಡಿದ್ದ ಈ ಮುಖಂಡ ಈ ಬಾರಿಯ ಜೆಡಿಎಸ್-ಬಿಜೆಪಿ ದೋಸ್ತಿಗೂ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರಚಾರದಲ್ಲೂ ಸಕ್ರಿಯ ಭಾಗವಹಿಸುವಿಕೆಯನ್ನು ತೋರಿಸಿಲ್ಲ.
ಈತನೇ ಈ ಸೆಕ್ಸ್ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ ಇದನ್ನೇ ಉಪಯೋಗಿಸಿಕೊಂಡ ಕಾಂಗ್ರೆಸ್ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಪೆನ್ ಡ್ರೈವ್ ಮೂಲಕ ಊರು ತುಂಬಾ ಹಂಚಿದೆ ಎಂದು ತಿಳಿದುಬಂದಿದೆ.ಕುತೂಹಲ ಎಂದರೆ ಈ ಪೆನ್ ಡ್ರೈವ್ ನಲ್ಲಿಯ ದೃಶ್ಯಗಳು ಕೃತಕ ಬುದ್ದಿಮತ್ತೆ ಸುಧಾರಿತ ವರ್ಷನ್ ಗಳಾಗಿರಬಹುದು, ಪ್ರಜ್ವಲ್ ತನ್ನ ಗೆಳತಿಯೊಂದಿಗಿನ ಖಾಸಗಿ ಕ್ಷಣಗಳಾಗಿರಬಹುದು. ಇದನ್ನು ಬೇರೆ ಬೇರೆಯದಾಗಿ ವಿಂಗಡಿಸಿ ಕೃತಕ ಬುದ್ದಿಮತ್ತೆ (AI) ಮೂಲಕ ಹಲವು ಹುಡುಗಿಯರ ಜೊತೆಗಿನ ಸೆಕ್ಸ್ ತುಣುಕುಗಳಾಗಿ ಪಸರಿಸಲಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಯಾರಾದರೂ ತಮ್ಮ ಲೈಂಗಿಕ ಖಾಸಗಿ ಕ್ಷಣಗಳನ್ನು ಮದುವೆ ದಿಬ್ಬಣದ ರೀತಿಯಲ್ಲಿ ವಿಡಿಯೋ ಮಾಡ್ತಾರ ಎಂಬ ಪ್ರಶ್ನೆಯೂ ಎದ್ದಿದೆ. ಇದೆಲ್ಲದರಲ್ಲೂ ನನ್ನ ಪಾತ್ರವಿಲ್ಲ ಅಥವಾ ಇದೆ ಅಂತ ಹೇಳುವುದಕ್ಕಾದರೂ ಪ್ರಜ್ಚಲ್ ರೇವಣ್ಣ ಊರಲ್ಲಿ ಇರಬೇಕಿತ್ತು. ಆದರೆ ಪ್ರಜ್ವಲ್ ರಾತ್ರೋರಾತ್ರಿ ಜರ್ಮನಿಯ ಫ್ರಾಂಕ್ ಪರ್ಟ್ ಗೆ ಪರಾರಿಯಾಗಿದ್ದಾರೆ ಎಂಬ ಸುದ್ದಿ ಹರಡಿದೆ. ಹಾಸನದ ಪೆನ್ ಪೋರ್ನ್ ಡ್ರೈ ವ್ ಈ ರಣ ಬೇಸಗೆಯಲ್ಲೂ ಗೌಡ ಫ್ಯಾಮಿಲಿಯಲ್ಲಿ ಬೆನ್ನಲ್ಲಿ ಚಳಿ ಹುಟ್ಟಿಸಿದ್ದಂತೂ ಹೌದು.