ಹಾಸನ: ಊರು ತುಂಬಾ ಪ್ರಜ್ವಲ್ ರೇವಣ್ಣನ ರಸಿಕತೆಯ ಸಾವಿರಾರು ಪೆನ್‌ಡ್ರೈವ್‌ಗಳು ಹಂಚಲ್ಪಟ್ಟಿವೆ. ಈ ವಿಡಿಯೋಗಳು ಲೀಕ್ ಆಗಲು ಕಾರಣ ಪ್ರಜ್ವಲ್ ಕಾರು ಚಾಲಕ ಕಾರ್ತೀಕ್ ಎಂದು ಹೇಳಲಾಗುತಿತ್ತು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಕೆಲ ತಿಂಗಳ ಹಿಂದೆ ಇದೇ ಕಾರ್ತಿಕ್ ಪ್ರೆಸ್ ಮೀಟ್ ಮಾಡಿ ಆರೋಪವೊಂದನ್ನು ಮಾಡ್ತಾನೆ.
14 ವರ್ಷಗಳ ಕಾಲ ಪ್ರಜ್ವಲ್ ರೇವಣ್ಣಗೆ ನಾನು ಕಾರು ಚಾಲಕನಾಗಿದ್ದೆ. ನನಗೆ ಸೇರಿದ 13 ಎಕರೆ ಜಾಗವನ್ನು ಭವಾನಿ ರೇವಣ್ಣ & ಫ್ಯಾಮಿಲಿ ನುಂಗಿ ಹಾಕಿದೆ ಎಂಬ ಆರೋಪವನ್ನು ಕಾರ್ತಿಕ್ ಮಾಡ್ತಾನೆ.
ನನ್ನನ್ನು ಮತ್ತು ಮಡದಿಯನ್ನು ಕೂಡಿ ಹಾಕಿ ಹಲ್ಲೆ ಮಾಡಿ ನನ್ನ ಆಸ್ತಿಯನ್ನು ಬರೆಸಿಕೊಂಡರು ಎಂದು ಗಂಭೀರ ಆರೋಪವನ್ನು ಕಾರ್ತಿಕ್ ಮಾಡಿದ್ದ. ಮಾತನಾಡೋದಿದೆ ಅಂತ ಮನೆಗೆ ಕರೆಸಿ ಹಲ್ಲೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಕಾರ್ತಿಕ್, ನಾನು ದುಡಿದು ಖರೀದಿ ಮಾಡಿದ ಏಕೈಕ ಆಸ್ತಿಯನ್ನು ಭವಾನಿ ರೇವಣ್ಣ ಕುಟುಂಬ ತಮಗೆ ಬೇಕಾದವರ ಹೆಸರಿಗೆ ಬರೆಸಿಕೊಂಡರು. ಬರೆದುಕೊಡದೇ ಹೋದರೆ ನಿಮ್ಮನ್ನ ಸಾಯಿಸೋದಾಗಿ ಬೆದರಿಕೆ ಹಾಕಿದ್ರು. ನಾವು ಹೇಳಿದ ಮಾತು ಕೇಳದೆ ಹೋದರೆ ಸುಳ್ಳು ಕೇಸ್ ಹಾಕೋದಾಗಿ ಬೆದರಿಸಿದ್ರು, ಆಯ್ತು ನಾನು ಕಾನೂನು ಹೋರಾಟ ಮಾಡೋದಾಗಿ ಹೇಳಿದರೂ ಬಿಡದೆ ಕಿರುಕುಳ ನೀಡಿದರು ಎಂದು ಆರೋಪ ಮಾಡಿದ್ದರು.
ಇದೆಲ್ಲವೂ ಆಗುವಾಗ ಭವಾನಿ ರೇವಣ್ಣ ನನ್ನ ಹೆಂಡತಿ ಮೇಲೆ ಹಲ್ಲೆ ಮಾಡಿದ್ರು ಎಂದು ಹೇಳಿರುವ ಕಾರ್ತಿಕ್, ನನ್ನ ಮಡದಿ ಗರ್ಭಿಣಿ ಇದ್ದಾಳೆ ಎಂದು ಹೇಳಿದ ಮೇಲೂ ಕೂಡ ಹಲ್ಲೆ ಮಾಡಿದ್ರು. ಹಲ್ಲೆಯಿಂದ ನನ್ನ ಪತ್ನಿ ಕೆಳಗೆ ಬಿದ್ದರು, ನಂತರ ನಮ್ಮನ್ನ ಐಬಿಯಲ್ಲಿ ಕೂಡಿ ಹಾಕಿದ್ರು. ಮರುದಿನ ಸಬ್ ರಿಜಿಸ್ಟ್ರಾರ್ ಕಛೇರಿಗೆ ಕರೆದೊಯ್ದು ಆಸ್ತಿ ಪರಬಾರೆ ಮಾಡಿದ್ರು. ಈ ವೇಳೆ ರೇವಣ್ಣ ಅವರ ಪಿಎ ರವಿ ಕೂಡ ಅಲ್ಲೇ ಇದ್ದರು, ಆ ಕ್ಷಣದಲ್ಲಿ ನಾನು ವಿರೋಧ ಮಾಡದೇ ಇರಲು ನನ್ನ ಹೆಂಡತಿಯನ್ನ ಕೂಡಿ ಹಾಕಿಕೊಂಡಿದ್ದರು. ನಾನು ವಿರೋಧ ಮಾಡಿದ್ರೆ ನಾನು ಬದುಕುವ ಯಾವುದೇ ಸಾಧ್ಯತೆ ಇರಲಿಲ್ಲ ಎಂದು ಹೇಳಿದ್ದರು.
ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ವಿಡಿಯೋ ಮಾಡಿ ರಿಲೀಸ್ ಮಾಡಿರುವ ಕಾರ್ತೀಕ್, ಪೆನ್ ಡ್ರೈವ್ ರಿಲೀಸ್ ಆಗಿರುವ ವಿಚಾರದ ಸಂಬಂಧ ಹಲವು ಮಹತ್ವದ ಮಾಹಿತಿಗಳನ್ನು ಹೊರಗೆಡವಿದ್ದಾರೆ.. ಬಿಜೆಪಿ ನಾಯಕನ ವಿರುದ್ಧ ಅವರು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾನು ಸುಮಾರು 15 ವರ್ಷಗಳಿಂದ ಪ್ರಜ್ವಲ್ ರೇವಣ್ಣ ಹಾಗೂ ಅವರ ಕುಟುಂಬದ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ.. ಒಂದು ವರ್ಷದ ಹಿಂದೆ ನಾನು ಕೆಲಸ ಬಿಟ್ಟಿದ್ದೇನೆ. ನನಗೆ ಯಾರಿಂದಲೂ ನ್ಯಾಯ ಸಿಗುವುದಿಲ್ಲ ಎಂದು ಗೊತ್ತಾದಾಗ ನನಗೆ ಬಿಜೆಪಿ ಮುಖಂಡ ದೇವರಾಜೇ ಗೌಡ ಕಾಣಿಸಿದರು.. ಅವರು ಕೂಡಾ ರೇವಣ್ಣ ಫ್ಯಾಮಿಲಿ ವಿರುದ್ಧ ಹೋರಾಟ ಮಾಡುತ್ತಿದ್ದರು.. ಇದೇ ವೇಳೆ ಅಶ್ಲೀಲ ವಿಡಿಯೋ ರಿಲೀಸ್ ಮಾಡಬಾರದು ಎಂದು ಪ್ರಜ್ವಲ್ ರೇವಣ್ಣ ಸ್ಟೇ ತಂದಿದ್ದರು.
ಇನ್ನು ದೇವರಾಜೇಗೌಡ ಅವರು, ನಾನು ಯಾರಿಗೂ ತೋರಿಸೋದಿಲ್ಲ.. ನನಗೆ ವಿಡಿಯೋಗಳು ಫೋಟೋಗಳು ಕೊಡು ಎಂದು ಕೇಳಿದ್ದರು. ನಾನು ಅವರನ್ನು ನಂಬಿ ದೇವರಾಜೇಗೌಡ ಅವರಿಗೆ ವಿಡಿಯೋಗಳ ಒಂದು ಕಾಪಿ ಕೊಟ್ಟಿದ್ದೆ ಎಂದು ಡ್ರೈವರ್ ಕಾರ್ತೀಕ್ ಹೇಳಿಕೊಂಡಿದ್ದಾರೆ..
ಯಾರಿಗೂ ಕೊಡುವುದಿಲ್ಲ ಎಂದು ವಿಡಿಯೋಗಳನ್ನು ಪಡೆದುಕೊಂಡ ದೇವರಾಜೇಗೌಡ ಅವರು ತಮ್ಮ ಸ್ವಾರ್ಥಕ್ಕಾಗಿ ವಿಡಿಯೋಗಳನ್ನು ಬಳಸಿಕೊಂಡಿದ್ದಾರೆ ಎಂದು ಡ್ರೈವರ್ ಕಾರ್ತೀಕ್ ಆರೋಪ ಮಾಡಿದ್ದಾರೆ.. ಹೊಳೆನರಸೀಪುರದ ಬಿಜೆಪಿ ಅಭ್ಯರ್ಥಿಯಾಗಿದ್ದ ದೇವರಾಜೇಗೌಡರಿಗೆ ಬಿಟ್ಟರೆ ನಾನು ಯಾರಿಗೂ ವಿಡಿಯೋಗಳನ್ನು ಕೊಟ್ಟಿಲ್ಲ. ಚುನಾವಣೆ ಸಮಯದಲ್ಲಿ ಆ ಪೆನ್ ಡ್ರೈವ್‌ಗಳನ್ನು ಯಾರು ಹಂಚಿದರು ಎಂಬುದು ಕೂಡಾ ನನಗೆ ಗೊತ್ತಿಲ್ಲ ಎಂದು ಡ್ರೈವರ್ ಕಾರ್ತೀಕ್ ಸ್ಪಷ್ಟನೆ ಕೊಟ್ಟಿದ್ದಾರೆ.
ಕಾಂಗ್ರೆಸ್ ನವರಿಗೆ ಕೊಡುವುದಿದ್ದರೆ ನಾನು ದೇವರಾಜೇಗೌಡರ ಬಳಿ ಹೋಗುತ್ತಿರಲಿಲ್ಲ. ಪ್ರಜ್ವಲ್ ಅವರು ಸ್ಟೇ ತಂದ ಬಗ್ಗೆಯೂ ನಾನು ದೇವರಾಜೇಗೌಡರಿಗೆ ಹೇಳಿದ್ದೆ. ಹೀಗಿದ್ದರೂ ಅವರು ಯಾವ ಕಾರಣಕ್ಕೆ ಆ ವಿಡಿಯೋಗಳನ್ನು ದುರ್ಬಳಕೆ ಮಾಡಿಕೊಂಡರೋ ಗೊತ್ತಿಲ್ಲ ಎಂದು ಕಾರ್ತೀಕ್ ಹೇಳಿದ್ದಾರೆ. ಪ್ರಕರಣ ಬೆಳಕಿಗೆ ಬಂದಾಗಿನಿಂದ ಕಾರ್ತೀಕ್ ಅಜ್ಞಾತ ಸ್ಥಳದಲ್ಲಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಈ ನಡುವೆ ಅವರು ವಿಡಿಯೋ ಮಾಡಿ ಸ್ಪಷ್ಟನೆ ಕೊಟ್ಟಿದ್ದಾರೆ.