ಕೊಡಗು: ಮದುವೆ ರದ್ದಾಗಿದ್ದಕ್ಕೆ ಕೋಪಗೊಂಡ ಹಂತಕ ಪೊನ್ನಂಡ ಪ್ರಕಾಶ ಬಾಲಕಿ ಮೀನಾಳನ್ನು ಕೊಲೆ ಮಾಡಿ ರುಂಡದೊಂದಿಗೆ ಕಾಡಿಗೆ ಪರಾರಿಯಾಗಿ, ಅದನ್ನು ಮರದ ಮೇಲೆ ಇಟ್ಟಿದ್ದ ಎನ್ನುವುದು ತನಿಖೆಯಿಂದ ಬಯಲಾಗಿದೆ. ಅಲ್ಲದೆ ಹಂತಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ವದಂತಿ ಹಬ್ಬಿಸಿ ಪರಾರಿಯಾಗಲು ಅಥವಾ ಪೊಲೀಸರ ತನಿಖೆಯನ್ನು ದಿಕ್ಕು ತಪ್ಪಿಸಲು ಮುಂದಾಗಿದ್ದ ಎನ್ನುವುದು ಬಯಲಾಗಿದೆ. ಅಲ್ಲದೆ ತನ್ನ ಸಹೋದರಿಯ ರುಂಡವನ್ನು ನೋಡಿ ಬೆಚ್ಚಿಬಿದ್ದ ಸಹೋದರ ಆವೇಶ ಬಂದವನಂತೆ ವಿಚಿತ್ರವಾಗಿ ವರ್ತಿಸಿದ್ದಾನೆ.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಗುರುವಾರವಷ್ಟೇ ಫಲಿತಾಂಶ ಪ್ರಕಟಿಸಿತ್ತು. ಅಂತೆಯೇ ಸುರ್ಲಬ್ಬಿ ಸರ್ಕಾರಿ ಹೈಸ್ಕೂಲ್ನ ಏಕೈಕ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೀನಾ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆಕೆ ತೇರ್ಗಡೆಗೊಂಡಿರುವ ಸಂಗತಿ ಶಾಲಾ ಅಧ್ಯಾಪಕರಿಗೆ ಸಂತಸ ತಂದಿದ್ದು. ಅಲ್ಲದೆ ಶಾಲೆಯಲ್ಲಿ ಶೇಕಡಾ 100 ಫಲಿತಾಂಶ ಬಂದಿತ್ತು. ಆದರೆ ಸಂಜೆಯ ವೇಳೆಗೆ ಬಾಲಕಿ ಮೀನಾಳನ್ನು ಹಂತಕ ಪೊನ್ನಂಡ ಪ್ರಕಾಶ ತಲೆ ಕತ್ತರಿಸಿ ಭಯಾನಕವಾಗಿ ಹತ್ಯೆ ಮಾಡಿ ಕಾಡಿಗೆ ಪರಾರಿಯಾಗಿ ರುಂಡವನ್ನು ಮರದ ಮೇಲೆ ಇಟ್ಟಿದ್ದ.
ಕಾಡಿಗೆ ಪಾರಿಯಾದ ಹಂತಕ ಪ್ರಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ವದಂತಿ ಹಬ್ಬಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಎಸ್.ಪಿ. ರಾಮರಾಜನ್, ಈ ಕುರಿತ ಸುದ್ದಿಯನ್ನು ಪರಿಶೀಲಿಸಲಾಗುತ್ತಿದೆ. ಮೃತದೇಹ ಸಿಕ್ಕಿದೆ ಎಂದು ಹೇಳಲಾದ ಪ್ರದೇಶದಲ್ಲಿ ಹುಡುಕಾಟ ನಡೆದಿದೆ. ಆದರೆ, ಈವರೆಗೆ ಯಾವುದೇ ಮೃತದೇಹ ಸಿಕ್ಕಿಲ್ಲ ಎಂದು ಹೇಳಿದ್ದರು. ಆದರೆ ಮರುದಿನ ಹಂತಕ ಅರೆಸ್ಟ್ ಆಗಿದ್ದ. ವಿಚಿತ್ರವೆಂದರೆ ಪ್ರಕಾಶನೇ ತನ್ನ ಗೆಳೆಯರ ಮುಖಾಂತರ ಆತ್ಮಹತ್ಯೆಯ ಸುದ್ದಿ ಹಬ್ಬಿಸಿರುವ ಬಗ್ಗೆ ಶಂಕೆ ಉಂಟಾಗಿರುವುದರಿಂದ, ಹಂತಕನಿಗೆ ಪರಾರಿಯಾಗಲು ಅವನ ಗೆಳೆಯರೂ ಸಹಾಯ ಮಾಡಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಲೆಗಾಗಿ ನಿರಂತರ ಹುಡುಕಾಟ!
ನಿನ್ನೆ ಶುಕ್ರವಾರ ಇಡೀ ದಿನ ಹುಡುಕಾಡಿದ್ದರೂ ಬಾಲಕಿ ಮೀನಾಳ ತಲೆ ಸಿಕ್ಕಿರಲಿಲ್ಲ. ಇತ್ತ ಮಗಳ ತಲೆ ಸಿಗದೆ ಮೃತದೇಹದ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದರು. ಹೀಗಾಗಿ ಶನಿವಾರ ಮತ್ತೆ 40ಕ್ಕೂ ಹೆಚ್ಚು ಪೊಲೀಸರಿಂದ ಶೋಧ ಕಾರ್ಯ ನಡೆದಿದ್ದು, ಹತ್ಯೆಯಾಗಿದ್ದ ಮೀನಾ ರುಂಡ ಪತ್ತೆ ಮಾಡಿದ್ದಾರೆ. ತಲೆ ವಶಕ್ಕೆ ಪಡೆದು ಬಾಲಕಿ ಮನೆ ಬಳಿ ಮಹಜರ್ ನಡೆಸಿದ್ದಾರೆ.
ಮರುದಿನ ಅಂದರೆ ಇಂದು ಬೆಳಿಗ್ಗೆ ಕಾಡಿನಲ್ಲಿ ಬಚ್ಚಿಟ್ಟುಕೊಂಡಿದ್ದ ಆರೋಪಿ ಪ್ರಕಾಶ್ನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದರು. ಆದರೆ ಆರೋಪಿ ಸಿಕ್ಕರೂ ಬಾಲಕಿಯ ರುಂಡ ಪತ್ತೆಯಾಗಿರಲಿಲ್ಲ. ಇದೀಗ ಹತ್ಯೆ ನಡೆದ ಅನತಿ ದೂರದಲ್ಲೇ ಬಾಲಕಿಯ ತಲೆ ಪತ್ತೆಯಾಗಿದೆ. ಬಾಲಕಿಯ ತಲೆಯನ್ನು ಆರೋಪಿ ಪ್ರಕಾಶ್ ಮರದ ಮೇಲೆ ಇರಿಸಿದ್ದ. ಬಾಲಕಿಯ ತಲೆ ಹಾಗೂ ಆಕೆಯ ಚಪ್ಪಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಂತಕನ ಭೀಬತ್ಸ ಕೃತ್ಯ ಕಂಡು ಪೊಲೀಸರಂಥಾ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಆವೇಶ ಬಂದಂತೆ ವರ್ತಿಸಿದ ಮೀನಾ ಸಹೋದರ
ಕೊಡಗಿನಲ್ಲಿ ಬಾಲಕಿ ಹತ್ಯೆಯ ಸ್ಥಳ ಮಹಜರು ವೇಳೆ ವಿಚಿತ್ರ ಘಟನೆಯೊಂದು ನಡೆದಿದೆ. ರುಂಡ ಪತ್ತೆ ಸ್ಥಳದಲ್ಲಿ ಬಾಲಕಿ ಸಹೋದರನ ಮೈಮೇಲೆ ಶಕ್ತಿ ಆವಾಹನೆ ಆದ ರೀತಿ ವರ್ತಿಸಿದ್ದಾನೆ. ರುಂಡ ಪತ್ತೆಯಾದ ಸ್ಥಳಕ್ಕೆ ಆರೋಪಿ ಪ್ರಕಾಶ್ ಮತ್ತು ಬಾಲಕಿ ಸಹೋದರ ಹೋದಾಗ ಏಕಾಏಕಿ ಶಕ್ತಿ ಆವಾಹನೆ ಆದಂತೆ ವರ್ತಿಸಿರುವುದು ಪೊಲೀಸರನ್ನು ಬೆಚ್ಚಿಬೀಳುವಂತೆ ಮಾಡಿದೆ. ತನ್ನ ಸಹೋದರಿಯ ಭೀಬತ್ಸ ಕೊಲೆಯಿಂದ ಸಹೋದರ ಹಿಸ್ಟೀರಿಯಾಕ್ಕೆ ಒಳಗಾಗಿರಬಹುದು ಎನ್ನಲಾಗಿದೆ. ಕೂಡಲೇ ಅಲ್ಲಿದ್ದವರು ಮೀನಾಳ ಸಹೋದರನನ್ನು ಹಿಡಿದುಕೊಂಡು ಸಮಾಧಾನಪಡಿಸಿದರು.
ಮೀನಾ ಇನ್ನೂ ಹತ್ತನೇ ಕ್ಲಾಸ್ ಓದುತ್ತಿದ್ದ ಅಪ್ರಾಪ್ತೆ ಆಗಿದ್ದಳು. ಹೀಗಾಗಿ ಗುರುವಾರ ಮಧ್ಯಾಹ್ನ ಪೊಲೀಸರ ಸಮ್ಮುಖದಲ್ಲಿ ಮದುವೆ ನಿಶ್ಚಿತಾರ್ಥ ರದ್ದಾಗಿತ್ತು. ಸಂಜೆ ವೇಳೆ ಆಕೆಯ ಮನೆಗೆ ನುಗ್ಗಿದ ಆರೋಪಿ ಪ್ರಕಾಶ್ ಮೀನಾಳನ್ನು ಎಳೆದೊಯ್ದು ಕೋಳಿ ಕತ್ತರಿಸಿದಂತೆ ಆಕೆಯ ತಲೆಯನ್ನು ಕತ್ತರಿಸಿ ಕೊಯ್ದು ರುಂಡದೊAದಿಗೆ ಪರಾರಿಯಾಗಿದ್ದ. ಭೀಕರ ಘಟನೆಯು ಸುತ್ತಲಿನ ಜನರನ್ನು ಬೆಚ್ಚಿ ಬೀಳಿಸಿತ್ತು.
ಆಕೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಗುರುವಾರವಷ್ಟೇ ಫಲಿತಾಂಶ ಪ್ರಕಟಗೊಂಡಿತ್ತು. ಇದೇ ವೇಳೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಮೀನಾ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಲಾಗಿತ್ತು. ಪೊಲೀಸರೇ ಮುಂದೆ ನಿಂತು ಮದುವೆಯನ್ನು ಕೊನೆಗೊಳಿಸಿದ್ದರು. ಆದರೆ ಸಂಜೆ ವೇಳೆಗೆ ಆಕೆಯನ್ನು ಎಳೆದೊಯ್ದು ಪ್ರಕಾಶ್ ಕೊಲೆ ಮಾಡಿದ್ದ. ಬಾಲಕಿಯನ್ನು ಆರೋಪಿ ಪ್ರಕಾಶ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಅವರ ಮದುವೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಬಾಲಕಿಗೆ ಮದುವೆಯ ಕಾನೂನುಬದ್ಧ ವಯಸ್ಸಾಗದ ಕಾರಣ ಪೊಲೀಸರು ಅದಕ್ಕೆ ತಡೆಯೊಡ್ಡಿದ್ದರು ಎನ್ನಲಾಗಿದೆ. ಇದರಿಂದ ಆರೋಪಿ ಕೆರಳಿದ್ದ. ಸಂಜೆ ವೇಳೆ ಬಾಲಕಿಯ ಮನೆಗೆ ನುಗ್ಗಿದ ಆತ ಅಲ್ಲಿಂದ ಎಳೆದೊಯ್ದಿದ್ದ. ಬಳಿಕ ಕತ್ತು ಕತ್ತರಿಸಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಹೋಗಿದ್ದ.