ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನೆಲೆ ಅಪರಾಧಿ ಮೂಡಬಿದ್ರೆಯ ಪಡುಮಾರ್ನಾಡು ಕೆಸರುಗದ್ದೆ ನಿವಾಸಿ ಆಸಿಫ್‌ನಿಗೆ 5 ವರ್ಷಗಳ ಸಾದಾ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಹೈಸ್ಕೂಲೊಂದರ ವಿದ್ಯಾರ್ಥಿ ತನ್ನ ಗೆಳತಿಯ ಜೊತೆ ನಿಂತಿದ್ದಾಗ, ಗೆಳತಿಯ ನೆರೆಮನೆಯಾತನ ಜೊತೆಗೆ ಪೀಡನೆಗೆ ಒಳಗಾದ ಸಂತ್ರಸ್ತ ಯುವತಿಯೂ ಮನೆಗೆ ಬೈಕ್‌ನಲ್ಲಿ ತೆರಳಲು ಹೋದಾಗ ಆರೋಪಿ ಆಸಿಫ್ ಆಕೆಯನ್ನು ತಡೆದು ‘ನೀನು ಅನ್ಯ ಧರ್ಮದವನ ಜೊತೆಗೆ ಯಾಕೆ ಹೋಗುತ್ತಿ’ ಎಂದು ಕೆನ್ನೆಗೆ ಹೊಡೆದು ಮಾನ ಹಾನಿ ಮಾಡಿದ್ದ. ಜೊತೆಗೆ ಆಕೆಗೆ ಲೈಂಗಿಕ ಕಿರುಕುಳ ನೀಡಿ, ಕರೆದುಕೊಂಡು ಹೋಗಲು ಬಂದ ಯುವಕನ ಮೇಲೆಯೂ ಹಲ್ಲೆ ಮಾಡಿದ್ದ. ಈ ಘಟನೆ 2019 ರ ಫೆ. 10 ರಂದು ನಡೆದಿತ್ತು.
ಈ ಸಂಬಂಧ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ನ್ಯಾಯಾಲಯ ಆರೋಪಿ ಅಸಿಫ್ ಅಪರಾಧಿ ಎಂದು ಘೋಷಿಸಿ ಶಿಕ್ಷೆ ಪ್ರಕಟಿಸಿರುವುದಾಗಿದೆ.
ದಂಡದ ಮೊತ್ತ 20 ಸಾವಿರದಲ್ಲಿ 10 ಸಾವಿರವನ್ನು ಸಂತ್ರಸ್ಥೆಗೆ ನೀಡಲು ಸೂಚಿಸಲಾಗಿದೆ. ಹಾಗೆಯೇ ದಂಡ ತರಲು ತಪ್ಪಿದಲ್ಲಿ ಹೆಚ್ಚುವರಿ 3 ತಿಂಗಳು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಹೇಳಲಾಗಿದೆ. ಹಾಗೆಯೇ ಸಂತ್ರಸ್ಥೆಗೆ ಕಾನೂನು ಪ್ರಾಧಿಕಾರ 1 ಲಕ್ಷ ರೂ. ಪರಿಹಾರ ನೀಡಲು ನಿರ್ದೇಶಿಸಲಾಗಿದೆ.
ಆಸಿಫ್ ವಿರುದ್ಧ ಹಲವು ಪ್ರಕರಣಗಳಿಗೆ ಸಂಬಂಧಿಸಿದ ಹಾಗೆ ವಿವಿಧ ಠಾಣೆಗಳಲ್ಲಿ ಕೇಸುಗಳಿರುವುದಾಗಿಯೂ ತಿಳಿದು ಬಂದಿದೆ.