ಕಾಲೇಜ್ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಕೇಸ್‌ನ ತನಿಖೆ ಹೊಣೆ ಸಿಐಡಿ ಹೆಗಲಿಗೇರಿದೆ. ಈ ನಡುವೆ ಆರೋಪಿ ಫಯಾಜ್ ಕುರಿತಂತೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ.
ಹುಬ್ಬಳ್ಳಿ: ಕಾಲೇಜ್ ವಿದ್ಯಾರ್ಥಿನಿ ನೇಹಾ ಹಿರೇಮಠ್ (Neha Hiremath) ಹತ್ಯೆ ಕೇಸ್‌ನ ತನಿಖೆ (investigation) ಹೊಣೆ ಸಿಐಡಿ (CID) ಹೆಗಲಿಗೇರಿದೆ. ಈಗಾಗಲೇ ಸಿಐಡಿ ಅಧಿಕಾರಿಗಳು ಆರೋಪಿ ಫಯಾಜ್‌ನನ್ನು ಕರೆತಂದು, ಸ್ಥಳ ಮಹಜರು ನಡೆಸಿದ್ದಾರೆ. ಈ ನಡುವೆ ಆರೋಪಿ ಫಯಾಜ್ (Fayaz) ಕುರಿತಂತೆ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ನೇಹಾ ಹತ್ಯೆಗೂ 5 ದಿನ ಮೊದಲೇ ಆರೋಪಿ ಫಯಾಜ್ ಚಾಕು ಖರೀದಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಫಯಾಜ್ ನೇಹಾ ಹತ್ಯೆ ಮಾಡುವ 5 ದಿನಗಳ ಮೊದಲೇ ಧಾರವಾಡದಲ್ಲಿ (Dharwad) ಚಾಕು ಖರೀದಿ ಮಾಡಿದ್ದನಂತೆ. ಹೀಗಂತ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ನೇಹಾ ಹತ್ಯೆಗೂ 5 ದಿನ ಮೊದಲು ಚಾಕು ಖರೀದಿಸಿದ್ದ ಫಯಾಜ್ ಆರೋಪಿ ಫಯಾಜ್ ಸ್ನೇಹಾ ಹತ್ಯೆಗೆ ಮೊದಲೇ ಸಂಚು ರೂಪಿಸಿದ್ದನಾ ಎಂಬ ಅನುಮಾನ ಶುರುವಾಗಿದೆ. ಕಾರಣ ಆತ 5 ದಿನ ಮೊದಲೇ ಚಾಕು ಖರೀದಿಸಿದ್ದನಂತೆ. ನೇಹಾ ಹತ್ಯೆಯಾಗುವ 5 ದಿನ ಮೊದಲೇ ಧಾರವಾಡದಲ್ಲಿ ಆರೋಪಿ ಫಯಾಜ್ ಚಾಕು ಖರೀದಿಸಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ. ಬ್ಯಾಗ್‌ನಲ್ಲಿ ಚಾಕು ಇಟ್ಟುಕೊಂಡು ಓಡಾಟ ನೇಹಾಳನ್ನು ಕೊಲೆ ಮಾಡೋ ಉದ್ದೇಶದಿಂದ ಐದು ದಿನ ಮೊದಲೇ ಚಾಕು ಖರೀದಿ ಮಾಡಿದ್ದಾಗಿ ಆರೋಪಿ ಫಯಾಜ್ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಚಾಕು ಖರೀದಿ ಮಾಡಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಓಡಾಡಿದ್ದನಂತೆ. ನೇಹಾ ಚಲನವಲನದ ಮೇಲೆ ಫಯಾಜ್ ಕಣ್ಣು ನನಗೆ ಸಿಗದ ನೇಹಾ ಮತ್ತೆ ಯಾರಿಗೂ ಸಿಗಬಾರದು ಅನ್ನೋ ಹಗೆತನ ಬೆಳೆಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ನೇಹಾಳ ಪ್ರತಿಯೊಂದು ಚಲನವಲನ ಪರಿಶೀಲನೆ ಮಾಡ್ತಿದ್ದ ಫಯಾಜ್, ಏಪ್ರಿಲ್ 18ರಂದು ನೇಹಾಳನ್ನು ಎರಡೂವರೆ ಗಂಟೆ ಕಾದು ಕೊಲೆ ಮಾಡಿದ್ದ. ಬೈಕ್ ಹ್ಯಾಂಡಲ್ ಲಾಕ್ ಮಾಡದೇ ಬಂದಿದ್ದ ಆರೋಪಿ ನೇಹಾಳನ್ನು ಕೊಲೆ ಮಾಡೋ ಮುನ್ನ ಫಯಾಜ್ ತನ್ನ ಬೈಕ್ ಹ್ಯಾಂಡಲ್ ಲಾಕ್ ಮಾಡಿರಲಿಲ್ಲ. ಕಾಲೇಜ್ ಗೇಟ್ ಹೊರಗಡೆ ಬೈಕ್ ನಿಲ್ಲಿಸಿ, ಹ್ಯಾಂಡ್ ಲಾಕ್ ಮಾಡದೇ ಕಾಲೇಜ್ ಒಳಗೆ ಹೋಗಿದ್ದ. ಕೊಲೆ ಮಾಡಿದ ಬಳಿಕ ತಪ್ಪಿಸಿಕೊಂಡು ಹೋಗಲು ಈಸಿಯಾಗಲೇ ಅನ್ನೋ ಉದ್ದೇಶದಿಂದ ಹೀಗೆ ಮಾಡಿದ್ದ ಎನ್ನಲಾಗಿದೆ. ಮುಖ್ಯದ್ವಾರದಿಂದ ಓಡಿ ಹೋಗಿದ್ದ ಆರೋಪಿ ಇನ್ನು ಬೈಕ್ ಹ್ಯಾಂಡಲ್ ಲಾಕ್ ಮಾಡದೇ ಬಂದಿದ್ದ ಫಯಾಜ್, ನೇಹಾ ಕೊಲೆ ಮಾಡಿದ ಬಳಿಕ ಗಲಿಬಿಲಿಗೊಂಡಿದ್ದಾನೆ. ಈ ವೇಳೆ ತಾನು ಬೈಕ್ ಪಾರ್ಕ್ ಮಾಡಿದ್ದ ಜಾಗಕ್ಕೆ ತಲುಪದೆ ಹೋದಾಗ, ಕಾಲೇಜ್ ಮುಖ್ಯದ್ವಾರದಿಂದ ಓಡಿಹೋಗಿದ್ದ. ಸ್ಥಳ ಮಹಜರು ಮಾಡಿದ ಸಿಐಡಿ ಇನ್ನು ನೇಹಾ ಹತ್ಯೆ ಪ್ರಕರಣದಲ್ಲಿ ಶೇಕಡಾ 60ರಷ್ಟು ತನಿಖೆ ಮುಗಿಯೋ ಹೊತ್ತಲ್ಲಿ, ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿ ಸರ್ಕಾರ ಆದೇಶಿಸಿತ್ತು. ಇದೀಗ ಕ್ರೈಂ ಸ್ಪಾಟ್‌ನಲ್ಲಿ ಸಿಐಡಿ ಮಹಜರು ನಡೆದಿದೆ. ಆರೋಪಿ ಫಯಾಜ್‌ನನ್ನು ಕರೆತಂದು ಸಿಐಡಿ ಅಧಿಕಾರಿಗಳು ಸ್ಥಳ ಮಹಜರು ಮಾಡಿದ್ದಾರೆ. ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಸ್ಥಳ ಮಹಜರು ನಡೆದಿದ್ದು, ಈ ವೇಳೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ನೇಹಾ ನಿವಾಸಕ್ಕೆ ಹರ್ಷಿಕಾ-ಭುವನ್ ಭೇಟಿ ನೇಹಾ ಕುಟುಂಬಸ್ಥರಿಗೆ ಚಿತ್ರ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ದಂಪತಿ ಸಾಂತ್ವನ ಹೇಳಿದ್ದಾರೆ. ನೇಹಾ ತಂದೆ ನಿರಂಜನ ಹಿರೇಮಠ ಮನೆಗೆ ಆಗಮಿಸಿದ ಹರ್ಷಿಕಾ ದಂಪತಿ, ನೇಹಾ ಕೊಲೆಗೆ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಪುತ್ರ ವಸಂತ ಹೊರಟ್ಟಿ ಕೂಡ ನೇಹಾ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು.