ಬೆಳಗಾವಿ: ತಾಯಿಯೊಬ್ಬಳು ತನ್ನ ಮೂವರು ಮಕ್ಕಳ ಜೊತೆಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಯಭಾಗ ತಾಲೂಕಿನ ಚಿಂತಲಿಯಲ್ಲಿ ನಡೆದಿದೆ.
ಮೃತರನ್ನು ಶಾರದಾ ಮತ್ತು ಅವರ ಮಕ್ಕಳಾದ ಅಮೃತ, ಆದರ್ಶ ಎಂದು ಗುರುತಿಸಲಾಗಿದೆ.
ಪತಿಯ ಕಿರುಕುಳ ತಾಳಲಾರದೆ ಶಾರಾದಾ ಅವರು ತನ್ನಿಬ್ಬರು ಮಕ್ಕಳ ಜೊತೆಗೆ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮೃತ ಶಾರದಾ ಅವರ ಪತಿ ಅಶೋಕ್ ಪರಾರಿಯಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.