ಕಾರ್ಕಳ: ಹಿರ್ಗಾನದಲ್ಲಿರುವ ಲಕ್ಷ್ಮೀಪುರ ಆದಿಶಕ್ತಿ ಮಹಾಲಕ್ಷ್ಮಿ ದೇಗುಲದ ಆಡಳಿತ ಮಂಡಳಿಗೆ ಸಂಬಂಧಿಸಿದ ಹುದ್ದೆಯಿಂದ ಅಶೋಕ್ ನಾಯಕ್ ಅವರು ರಾಜೀನಾಮೆ ನೀಡಿದ್ದಾರೆ.
ಆಡಳಿತ ಮಂಡಳಿಯಲ್ಲಿ ಅಶೋಕ್ ನಾಯಕ್ ಅವರು ಮುಂದುವರೆದಲ್ಲಿ ಜೀರ್ಣೋದ್ಧಾರ ಸೇರಿದಂತೆ ದೇಗುಲಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಕಾರ್ಯಕ್ರಮಗಳಲ್ಲಿ ತಾವು ಭಾಗವಹಿಸುವುದಿಲ್ಲ ಎಂದು ಭಕ್ತರ ಮುಂದೆ ಸ್ವಾಮೀಜಿ ಅವರು ಹೇಳಿಕೊಂಡಿದ್ದು, ಈ ಕಾರಣದಿಂದ ಅಶೋಕ್ ಕುಮಾರ್ ರಾಜೀನಾಮೆಗೆ ಒತ್ತಡಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ರಾಜಾಪುರ ಸಾರಸ್ವತ ಸಮಾಜದ ಸ್ವಾಮೀಜಿಗಳ ಸೂಚನೆಯಂತೆ ರಾಜೀನಾಮೆ ನೀಡಿರುವುದಾಗಿ ಅಶೋಕ್ ತಿಳಿಸಿದ್ದಾರೆ.
ಈ ಹಿಂದೆ ದೇಗುಲದಲ್ಲಿ ನಡೆದ ಸಭೆಯೊಂದರಲ್ಲಿ ಅಶೋಕ್ ನಾಯಕ್ ಭಕ್ತರ ಮೇಲೆ ಹಲ್ಲೆ ನಡೆಸುತ್ತಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಈ ಸಂಬಂಧ ಜಗದೀಶ್ ಎಂಬವರು ಕಾರ್ಕಳ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡಿದ್ದರು.