ಮಂಗಳೂರು: ಮೂವತ್ತಕ್ಕೂ ಹೆಚ್ಚು ಮಂದಿ ವಿಚಾರಣಾಧೀನ ಕೈದಿಗಳು ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಅಸ್ವಸ್ಥಗೊಂಡ ಘಟನೆ ಇಂದು ನಡೆದಿದೆ.
ಆಹಾರದಲ್ಲಿ ಏನೋ ಸಮಸ್ಯೆ ಉಂಟಾಗಿ (ಫುಡ್ ಪಾಯ್ಸನ್) ಖೈದಿಗಳು ಅಸ್ವಸ್ಥರಾಗಿರಬಹುದು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದು, ಅಸ್ವಸ್ಥ ಖೈದಿಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.