ಸುಳ್ಯ: ಕೆಲ ದಿನಗಳ ಹಿಂದಷ್ಟೇ ನಗರದ ಖಾಸಗಿ ಕಾಲೇಜಿನ ಡೆಂಟಲ್ ವಿದ್ಯಾರ್ಥಿನಿ ಕಾಲೇಜಿನ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ.
ಬೆಳಗಾವಿ ಮೂಲದ ಕೃತಿಕಾ ಸಿದ್ದಣ್ಣ ನಿಡೋಣಿ ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಮೃತ ಯುವತಿಯ ತಂದೆ ನವೀನ್ ಎಂಬಾತ ಮತ್ತು ವಸತಿ ಗೃಹದ ವಾರ್ಡನ್ ಪುತ್ತೂರಿನ ಕುರಿಯದ ತಾರಾ ಕುಮಾರಿ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಾಗಿದೆ.
ಆಕೆ ಅಧ್ಯಯನ ಮಾಡುತ್ತಿದ್ದ ಕಾಲೇಜಿನಲ್ಲೇ ಓದುತ್ತಿದ್ದ ನವೀನ್ ಆಕೆಗೆ ಪದೇ ಪದೆ ಕರೆ ಮಾಡಿ ಹಿಂಸೆ ನೀಡುತ್ತಿದ್ದು, ಅವಳ ತಂದೆಗೆ ಫೋಟೋ, ವಿಡಿಯೋ ಕಳಿಸುವ ಬೆದರಿಕೆ ಒಡ್ಡುತ್ತಿದ್ದ. ಇದರಿಂದ ಮಾನಸಿಕವಾಗಿ ನೊಂದ ಕೃತಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಬಂದಿದೆ.
ಇನ್ನು ಈ ಎಲ್ಲಾ ವಿಷಯ ತಾರಾ ಅವರಿಗೂ ತಿಳಿದಿದ್ದು, ಅವರು ಹೆತ್ತವರ ಗಮನಕ್ಕೆ ತಾರದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ನವೀನ್ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.