ಪುತ್ತೂರು: ನಗರದ ಮುಕ್ರಂಪಾಜಡಿಯಲ್ಲಿ ದ್ವಿಚಕ್ರ ವಾಹನಕ್ಕೆ ಪಿಕಪ್ ಢಿಕ್ಕಿಯಾದ ಪರಿಣಾಮ ದ್ವಿಚಕ್ರ ಸವಾರ ಗಂಭೀರ ಗಾಯಗೊಂಡ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಪಂಜ ಕೂತ್ಕುಂಜದ ಸಂಪ ನಿವಾಸಿ ನಿವೃತ್ತ ಶಿಕ್ಷಕರಾದ ಕೃಷ್ಣ ಭಟ್ ಎಂದು ಗುರುತಿಸಲಾಗಿದೆ. ಪುತ್ತೂರಿಗೆ ಪಂಜದಿಂದ ಬೈಕಿನಲ್ಲಿ ಬರುತ್ತಿದ್ದ ವೇಳೆ ಪಿಕಪ್ ಢಿಕ್ಕಿ ಹೊಡೆದ ಪರಿಣಾಮ ಕೃಷ್ಣ ಭಟ್ ಬೈಕ್ ಸಮೇತ ನೆಲಕ್ಕುರುಳಿ ಗಂಭೀರ ಗಾಯಗೊಂಡಿದ್ದರು. ಹೀಗಿದ್ದರೂ ಪಿಕಪ್ ಚಾಲಕ ಯಾವುದೇ ಮಾನವೀಯತೆ ತೋರದೆ ಅಲ್ಲಿಂದ ವಾಹನ ಸಮೇತ ಪರಾರಿಯಾಗಿದ್ದಾನೆ.
ತಲೆಗೆ ತೀವ್ರ ಪ್ರಮಾಣದ ಗಾಯಗಳಾದ ಪರಿಣಾಮ ಪುತ್ತೂರು ಆಸ್ಪತ್ರೆಯಿಂದ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ.