ಸಹೋದರನ ಪುತ್ರನನ್ನು ಕತ್ತಿಯಿಂದ ಕಡಿದು ಕೊಂದ ಆರೋಪದಲ್ಲಿ ಅಂದರ್ ಆಗಿದ್ದ ಆರೋಪಿ ಜಯಚಂದ್ರ
ಧರ್ಮಸ್ಥಳ: ಆಸ್ತಿ ವಿಚಾರಕ್ಕೆ ಸಹೋದರನ ಪುತ್ರನನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಆರೋಪಿ ಜಯಚಂದ್ರ ಗೌಡ ನನ್ನು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ.
ಆರೋಪಿ ಸ್ಥಾನದಲ್ಲಿದ್ದ ಜಯಚಂದ್ರ ಎಂಬಾತ ತನ್ನ ಸಹೋದರ ಕೆಂಚಪ್ಪ ಗೌಡರ ಪುತ್ರ ಶಾಂತಪ್ಪ ಗೌಡ ಎಂಬವರ ಮೇಲೆ ತನ್ನ ಕೈಯಲ್ಲಿದ್ದ ಕತ್ತಿಯಿಂದ ಮನಸೋ ಇಚ್ಛೆ ಕಡಿದು ಹತ್ಯೆ ಮಾಡಿದ್ದ. ರಸ್ತೆ ಬದಿಯಲ್ಲಿ ಯಾತಕ್ಕಾಗಿ ಹುಲ್ಲು ತೆಗೆಸುತ್ತಿದ್ದೀರಿ ಎಂದು ಶಾಂತಪ್ಪ ಕೇಳಿದರು ಎನ್ನುವ ಕಾರಣಕ್ಕೆ ಜಯಚಂದ್ರ ಅವರನ್ನು ಅವಾಚ್ಯ ಶಬ್ಧಗಳಿಂಗ ನಿಂದಿಸಿ, ಕೊಲೆ ಮಾಡಿದ್ದ.
ಇದನ್ನು ಪ್ರತ್ಯಕ್ಷವಾಗಿ ಕಂಡ ಶಾಂತಪ್ಪನ ಅಕ್ಕ, ತಂದೆ, ತಾಯಿ ಮತ್ತು ಸಮೀಪದಲ್ಲೇ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಜೋಸೆಫ್ ಎನ್ನುವವರು ಶಾಂತಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನ ನಡೆಸುತ್ತಿರುವಾಗಲೇ ಅವರು ಮೃತಪಟ್ಟಿದ್ದರು. ಈ ಸಂಬಂಧ ಧರ್ಮಸ್ಥಳ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಆರೋಪಿ ಜಯಚಂದ್ರ ಮೆರೆದ ಕ್ರೌರ್ಯ ತೀವ್ರ ಸ್ವರೂಪದ್ದಾಗಿದ್ದು, ಇದರಿಂದ ಜಿಲ್ಲಾ ಸತ್ರ ನ್ಯಾಯಾಲಯ, ಹೈಕೋರ್ಟ್ ಆರೋಪಿಗೆ ಜಾಮೀನು ನಿರಾಕರಿಸಿತ್ತು.
ಆದರೆ ಸರಿಯಾದ ರೀತಿಯಲ್ಲಿ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿದೆ.