ವಿಟ್ಲ: ನಗರದ ಉರಿಮಜಲಿನಲ್ಲಿರುವ ಮನೆಯೊಂದಕ್ಕೆ ಹಾಡುಹಗಲೇ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿದ ಘಟನೆ ನಡೆದಿದೆ.
ಉರಿಮಜಲಿನ ದೇವಸ್ಯ ತಿರುವು ರಸ್ತೆಯಲ್ಲಿರುವ ಗಣೇಶ್ ಗೌಡ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿರುವುದಾಗಿದೆ. ಮನೆಯಲ್ಲಿ ಯಾರೂ ಇಲ್ಲ ಎನ್ನುವುದನ್ನು ತಿಳಿದ ಕಳ್ಳರು ಮನೆಯೊಳಕ್ಕೆ ನುಗ್ಗಿ ಸುಮಾರು ಏಳೂವರೆ ಪವನ್‌ಗಳಷ್ಟು ಚಿನ್ನವನ್ನು ಎಗರಿಸಿದ್ದಾರೆ.
ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ನಾಗರಾಜ್ ಎಚ್. ಇ. ಮತ್ತು ಎಸ್‌ಐ ವಿದ್ಯಾ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.