ಬೆಳಗಾವಿ: ಅಧಿಕಾರಿಗಳ ಕುರುಡುತನಕ್ಕೆ ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಡಿಪೋದಲ್ಲಿ ನಡೆದಿದೆ.
ಮೃತರನ್ನು ಕೇಶವ ಕಮಡೊಳಿ(57) ಎಂದು ಗುರುತಿಸಲಾಗಿದೆ.
ಕೇಶವ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಇದ್ದು ಡ್ಯೂಟಿ ಬದಲಾವಣೆ ಮಾಡುವಂತೆ ಅವರು ಅಧಿಕಾರಗಳ ಬಳಿ ವಿನಂತಿ ಮಾಡಿಕೊಂಡಿದ್ದರು. ಆದರೂ ಇವರ ಡ್ಯೂಟಿ ಬದಲಾವಣೆ ಮಾಡದೆ ಪಂಚರ್ ತೆಗೆಯುವ ಕೆಲಸವನ್ನೇ ಅಧಿಕಾರಿಗಳು ನೀಡಿದ್ದರು. ಕೆಲಸದ ಒತ್ತಡ ತಾಳಲಾರದೆ ಮತ್ತು ಅಧಿಕಾರಿಗಳ ನಡೆಗೆ ಬೇಸತ್ತು ಅವರು ಬಸ್ಸಿನಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇಶವ್ ಕುಟುಂಬಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.