ಗದಗ: ಕೋರ್ಲಹಳ್ಳಿ ಮದಲಗಟ್ಟಿ ಆಂಜನೇಯನ ದರ್ಶನ ಪಡೆದು, ಬಳಿಕ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂರು ಮಂದಿ ಯುವಕರು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರನ್ನು ಶರಣಪ್ಪ ಬಡಿಗೇರ್ (34), ಮಹೇಶ್ ಬಡಿಗೇರ್(36), ಗುರುನಾಥ ಬಡಿಗೇರ್(38) ಎಂದು ಗುರುತಿಸಲಾಗಿದೆ.
ಶರಣಪ್ಪ ಬಡಿಗೇರನ ಜನ್ಮದಿನದ ಹಿನ್ನೆಲೆಯಲ್ಲಿ ಐವರು ಸ್ನೇಹಿತರು ದೇವಸ್ಥಾನಕ್ಕೆ ಬಂದಿದ್ದು, ಇವರಲ್ಲಿ ಮೂರು ಮಂದಿ ಈಜಲು ತುಂಗಭದ್ರಾ ನದಿಗೆ ಇಳಿದಿದ್ದರು. ಶರಣಪ್ಪ ಬಡಿಗೇರನಿಗೆ ಈಜು ಬಾರದೇ ಹೋದರೂ ಆತ ನೀರಿಗಿಳಿದಿದ್ದ. ಆತ ಮುಳುಗುವುದನ್ನು ಕಂಡು ಮಹೇಶ್ ಮತ್ತು ಗುರುನಾಥ್ ನೀರಿಗೆ ಇಳಿದಿದ್ದು, ಬಳಿಕ ಮೂವರೂ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದವರ ಪತ್ತೆಗೆ ಶೋಧಕಾರ್ಯ ನಡೆಯುತ್ತಿದೆ. ಹೂವಿನ ಹಡಗಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.