ಮಂಗಳೂರು ; ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಹಿತ ಮಾಂಸವನ್ನು ಭಜರಂಗದಳದ ಕಾರ್ಯಕರ್ತರು ಮಿಂಚಿನ ಕಾರ್ಯಚರಣೆ ನಡೆಸಿ ಪತ್ತೆ ಮಾಡಿ ಕದ್ರಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.
ನಗರದ ಕದ್ರಿ ದೇವಸ್ಥಾನದ ದ್ವಾರದ ಬಳಿ ರಿಕ್ಷಾ ಟೆಂಪೋದಲ್ಲಿ ಅಕ್ರಮವಾಗಿ ಸುಮಾರು ನೂರು ಕೆ.ಜಿ ಗೂ ಅಧಿಕ ಅಕ್ರಮ ಗೋ ಮಾಂಸ ಸಾಗಾಟ ಮಾಡುತ್ತಿದ್ದರುವುದು ಪತ್ತೆಯಾಗಿದೆ. ನಂತರ ಕದ್ರಿ ಪೊಲೀಸರಿಗೆ ಮಾಹಿತಿ ನೀಡಿ, ಇಬ್ಬರು ಆರೋಪಿಗಳನ್ನು ಸಹಿತ ಗೋ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.