ಲಕ್ನೋ: ಹೋಳಿ ಹಬ್ಬಕ್ಕೆ ಸಂಬಂಧಿಸಿದ ಹಾಗೆ ಪೊಲೀಸ್ ಅಧಿಕಾರಿಯೊಬ್ಬರು ಜನರಿಗೆ ನೀಡಿದ ಸೂಚನೆಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಬಂಬಲಿಸಿದ್ದಾರೆ.
ಮಾರ್ಚ್ 14, ಶುಕ್ಕವಾರದಂದು ಹೋಳಿ ಹಬ್ಬದ ಸಂಭ್ರಮವಾಗಿದ್ದು, ಈ ಸಂದರ್ಭದಲ್ಲಿ ಮುಸ್ಲಿಮರು ಮನೆಯೊಳಗೆ ಇರಬೇಕು. ಶುಕ್ರವಾರ ವರ್ಷಕ್ಕೆ 52 ಬಾರಿ ಬರುತ್ತದೆ. ಆದರೆ ಹೋಳಿ ಬರುವುದು ವರ್ಷಕ್ಕೊಮ್ಮೆ ಮಾತ್ರ. ಹೋಳಿ ಆಚರಣೆಗಳ ಸಂಭ್ರಮ ಕಡಿಮೆಯಾಗುವ ವರೆಗೆ ಮುಸ್ಲಿಮರು ಮನೆಯಲ್ಲಿ ಇರಬೇಕು. ರಂಜಾನ್ ನಮಾಜ್ ಹಿನ್ನಲೆಯಲ್ಲಿ ಈ ಸೂಚನೆಯನ್ನು ಶಾಂತಿ ಸಮಿತಿ ಸಭೆಯಲ್ಲಿ ಪೊಲೀಸರು ನೀಡಿದ್ದರು.
ಈ ವಿಚಾರಕ್ಕೆ ಯೋಗೀಜಿ ಅವರು ಬೆಂಬಲ ಸೂಚಿಸಿದ್ದು, ಹಬ್ಬಗಳ ಸಮಯದಲ್ಲಿ ನಾವು ಪರಸ್ಪರ ಭಾವನೆಗಳನ್ನು ಗೌರವಿಸಬೇಕು. ಮುಸಲ್ಮಾನರು ಪ್ರತಿ ಶುಕ್ರವಾರವೂ ಪ್ರಾರ್ಥನೆ ಸಲ್ಲಿಸುತ್ತಾರೆ. ಆದರೆ ಹೋಳಿ ಹಬ್ಬ ಬರುವುದು ವರ್ಷದಲ್ಲಿ ಒಂದು ಬಾರಿ ಮಾತ್ರ. ನಮಾಜ್ ವಿಳಂಬ ಮಾಡಬಹುದು ಅಥವಾ ನಮಾಜ್ ಮಾಡಲು ಮಸೀದಿಗಳಿಗೆ ತೆರಳುವುದು ಕಡ್ಡಾಯವಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಉತ್ತರ ಪ್ರದೇಶದಲ್ಲಿ ಹೋಳಿ ದಿನದಂದು ಮುಸ್ಲಿಮರು ಮಧ್ಯಾಹ್ನ 2 ಗಂಟೆಯ ಬಳಿಕ ನಮಾಜ್ ಮಾಡಲು ನಿರ್ಧಾರ ಮಾಡಿದ್ದು, ಈ ಹಿನ್ನೆಲೆಯಲ್ಲಿ ಆ ಧರ್ಮದ ಮುಖಂಡರಿಗೆ ಯೋಗಿ ಧನ್ಯವಾದ ತಿಳಿಸಿದ್ದಾರೆ.
ಆದರೆ ಪೊಲೀಸ್ ಅಧಿಕಾರಿಗಳು ನಮಾಜ್ ಬಗ್ಗೆ ನೀಡಿದ ಹೇಳಿಕೆಗೆ ಮುಸ್ಲಿಂ ಮುಖಂಡರು ಆತಂಕ ವ್ಯಕ್ತಪಡಿಸಿದ್ದು, ಪೊಲೀಸರು ಬಿಜೆಪಿ ಪಕ್ಷದ ಏಜೆಂಟ್‌ಗಳ ಹಾಗೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.