ಕಲ್ಬುರ್ಗಿ: ಉಪನ್ಯಾಸಕರೋರ್ವರಿಗೆ ಅವರ ಕಾಲೇಜಿನ ಪಕ್ಕವೇ ಚಾಕು ಚುಚ್ಚಿದ ಘಟನೆ ನಡೆದಿದೆ.
ಚೂರಿ ಇರಿತಕ್ಕೆ ಒಳಗಾದ ಉಪನ್ಯಾಸಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಇವರು ನಗರದ ನೂತನ ವಿದ್ಯಾಲಯದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ವಿಷಯವನ್ನು ಬೋಧನೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಶಿವಕುಮಾರ್ ಅವರು ಕಾಲೇಜಿನತ್ತ ತೆರಳಲು ದ್ವಿಚಕ್ರ ವಾಹನವನ್ನು ತಿರುಗಿಸುತ್ತಿದ್ದಾಗ ಎದುರಿಗೆ ಬಂದ ದ್ವಿಚಕ್ರ ವಾಹನ ಸವಾರರು ತಕರಾರು ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಹೆಚ್ಚಾದ ಸಂದರ್ಭದಲ್ಲಿ ದ್ವಿಚಕ್ರ ವಾಹನದ ಸವಾರರು ಉಪನ್ಯಾಸಕನಿಗೆ ಚಾಕು ಇರಿದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಾಳು ಶಿವಕುಮಾರ್ ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.