ಬೆಂಗಳೂರು: ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ರಸ್ತೆಗೆ ಇಳಿಸುವವರ ವಿರುದ್ಧ ಸಂಚಾರಿ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಮದ್ಯಪಾನ ಮಾಡಿ ವಾಹನ ಚಾಲನೆ, ವ್ಹೀಲಿಂಗ್ ಸೇರಿದಂತೆ ಇನ್ನೂ ಹಲವಾರು ರೀತಿಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ 815 ಜನರ ವಾಹನ ಚಾಲನಾ ಪರವಾನಗಿ (ಲೈಸನ್ಸ್) ರನ್ನೇ ರದ್ದು ಮಾಡಿದ್ದಾರೆ. ಸಂಚಾರಿ ಪೊಲೀಸರು ಮತ್ತು ಸಾರಿಗೆ ಇಲಾಖೆಯ ಜಂಟಿ ಕಾರ್ಯಾಚರಣೆಯ ಮೂಲಕ ಈ ಕ್ರಮವನ್ನು ಕೈಗೊಂಡಿರುವುದಾಗಿದೆ.
ನಗರದ ಉತ್ತರ ವಿಭಾಗದ ವಿವಿಧ ಸಂಚಾರಿ ಠಾಣೆಗಳಿಗೆ ಸಂಬಂಧಿಸಿದ ಹಾಗೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ 745 ಜನರ ಡಿ ಎಲ್, ವ್ಹೀಲಿಂಗ್ ಮಾಡಿದ ಆರೋಪದಲ್ಲಿ 6, ಅಪಘಾತಕ್ಕೆ ಸಂಬಂಧಿಸಿದ ಹಾಗೆ 54 ಮತ್ತು ಹಿಟ್ ಆ್ಯಂಡ್ ರನ್ ಗೆ ಸಂಬಂಧಿಸಿದ ಹಾಗೆ 10 ಡಿಎಲ್ಗಳನ್ನು ಅಮಾನತು ಮಾಡಲಾಗಿದೆ.
2024 ರ ಜನವರಿಯಿಂದ 2025 ರ ಫೆಬ್ರವರಿ ವರೆಗೆ ಒಟ್ಟು 815 ಲೈಸನ್ಸ್ಗಳು ಅಮಾನತು ಆಗಿವೆ.