ತುಮಕೂರು: ತಿಪಟೂರಿನ ಹಟ್ನಾದಲ್ಲಿನ ದೇವಾಲಯದ ಕೆಂಪಮ್ಮ ದೇವರಿಗೆ ವಾಮಾಚಾರ ಮಾಡಿದ ಕಿಡಿಗೇಡಿಗಳು, ದೇಗುಲದ ಬಾಗಿಲಿಗೆ ಬೆಂಕಿ ಇಟ್ಟ ಘಟನೆ ನಡೆದಿದೆ.
ಹಟ್ನಾ ಸೇರಿದಂತೆ 32 ಗ್ರಾಮಗಳ ಅಧಿದೇವತೆಯಾಗಿರುವ ಕೆಂಪಮ್ಮ ದೇವರಿಗೆ ವಾಮಾಚಾರ ಮಾಡಿದ್ದಾರೆ ಎನ್ನಲಾಗಿದ್ದು, ನಿನ್ನೆ ರಾತ್ರಿ ನಡೆದ ಈ ಘಟನೆ ಇಂದು ಮುಂಜಾನೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಬಂದ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ವಾಮಾಚಾರ ಮಾಡಲು ಬಳಕೆ ಮಾಡಲಾದ ಕೆಲವು ವಸ್ತುಗಳು ಬೆಂಕಿಗೆ ಸುಟ್ಟು ಹೋಗಿದ್ದರೆ, ಇನ್ನೂ ಕೆಲವು ವಸ್ತುಗಳು ಪತ್ತೆಯಾಗಿವೆ. ಈ ಕುಕೃತ್ಯ ಎಸಗಿದವರನ್ನು ಶೀಘ್ರ ಬಂಧಿಸುವಂತೆ ಪೊಲೀಸರಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.