ಬೆಂಗಳೂರು: ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ, ಮಾಹಿತಿ ಮರೆಮಾಚಿದರೆ ದೂರು ದಾಖಲು ಮಾಡುವ ಹಕ್ಕು ಇರುವುದು ಕೇವಲ ಚುನಾವಣಾ ಆಯೋಗಕ್ಕೆ ಮಾತ್ರವೇ ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದೆ.
ಖಾಸಗಿ ವ್ಯಕ್ತಿಗಳು ಯಾವುದೇ ರೀತಿಯಲ್ಲಿ ಕ್ರಿಮಿನಲ್ ಕೇಸು ದಾಖಲಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ.
ಚುನಾವಣಾ ಅರ್ಜಿಯನ್ನು ಖಾಸಗಿ ವ್ಯಕ್ತಿಗಳು ದಾಖಲು ಮಾಡಬಹುದು. ದೂರುದಾರರು ಕಾನೂನಾತ್ಮಕ ಪರಿಹಾರಗಳನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ಹೈಕೋರ್ಟ್ ತಿಳಿಸಿದೆ.