ಮಂಗಳೂರು: ಕಳೆದ ಹಲವು ದಿನಗಳಿಂದ ಕಾಣೆಯಾಗಿದ್ದ ವಿದ್ಯಾರ್ಥಿ ನಿತೇಶ್ ಬೆಳ್ಚಡ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.
ನಿತೇಶ್ ಪ್ಯಾರಾಮೆಡಿಕಲ್ ವಿದ್ಯಾರ್ಥಿಯಾಗಿದ್ದು ಬಜ್ಪೆಯ ಮೂಡುಪೆರಾರ ನಿವಾಸಿಯಾಗಿದ್ದಾನೆ. ಈತ ಹಲವು ದಿನಗಳಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದ.
ಸದ್ಯ ನಾಪತ್ತೆಯಾದ ನಿತೇಶ್ ಪತ್ತೆಯಾಗಿದ್ದು, ಆತ ಗೋವಾದಲ್ಲಿದ್ದ ಎಂದು ತಿಳಿದು ಬಂದಿದೆ. ಫೆ. 13 ರಂದು ನಾಪತ್ತೆಯಾಗಿದ್ದ ಈತನ ಪತ್ತೆಗೆ ಪೊಲೀಸ್ ಇಲಾಖೆ ವಿವಿಧ ಆಯಾಮಗಳಲ್ಲಿ ಪ್ರಯತ್ನ ನಡೆಸಿತ್ತು.