ದೆಹಲಿ: ಉಗ್ರರನ್ನು ಪೋಷಣೆ ಮಾಡುತ್ತಿರುವ ರಾಷ್ಟ್ರ ಎಂದು ಜಗತ್ತಿನಲ್ಲೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ಭಾರತದ ಮೇಲೆ ಉಗ್ರರಿಗೆ ಸಂಬಂಧಿಸಿದ ಹಾಗೆ ಗೂಬೆ ಕೂರಿಸಲು ಮುಂದಾಗಿದೆ.
ಪಾಕಿಸ್ತಾನವು ಭಾರತ ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುತ್ತದೆ ಎನ್ನುವ ಮೂಲಕ ಜಗತ್ತಿನೆದುರು ನಗೆಪಾಟಿಲಿಗೀಡಾಗಿದೆ.
ಪಾಕಿಸ್ತಾನದ ಈ ಆರೋಪವನ್ನು ಬಲವಾಗಿ ತಳ್ಳಿ ಹಾಕಿರುವ ಭಾರತ, ಜಾಗತಿಕ ಭಯೋತ್ಪಾದನೆಯ ಕೇಂದ್ರ ಬಿಂದು ಯಾರು ಎನ್ನುವುದು ವಿಶ್ವಕ್ಕೆ ತಿಳಿದಿದೆ. ಪಾಕಿಸ್ತಾನದ ಆರೋಪವನ್ನು ಭಾರತ ಬಲವಾಗಿ ಖಂಡಿಸುತ್ತದೆ ಎಂದಿದೆ. ಹಾಗೆಯೇ ತನ್ನ ಆಂತರಿಕ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಳ್ಳುವಲ್ಲಿ ವಿಫಲವಾಗಿರುವ ಪಾಕಿಸ್ತಾನ ಬೇರೆ ರಾಷ್ಟ್ರದ ಮೇಲೆ ಬೆರಳು ತೋರಿಸುತ್ತಿದೆ. ಮೊದಲು ಅವರನ್ನೊಮ್ಮೆ ಅವರು ನೋಡಿಕೊಳ್ಳಬೇಕು ಎಂದು ಭಾರತ ಹೇಳಿದೆ.
ಕಳೆದ ಮಂಗಳವಾರ ಬಲೂಚಿಸ್ಥಾನದ ಜಾಫರ್ ಎಕ್ಸ್‌ಪ್ರೆಸ್ ಮೇಲೆ ನಜೆದ ಉಗ್ರ ದಾಳಿಯ ಬಳಿಕ ಪಾಕಿಸ್ತಾನ ಭಾರತದ ವಿರುದ್ಧ ಈ ಹೇಳಿಕೆ ನೀಡಿದ್ದು, ಇದಕ್ಕೆ ಭಾರತ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ನೀಡಿರುವುದಾದಿದೆ.