ಬೆಂಗಳೂರು: ವಯಸ್ಸಾದ ಅತ್ತೆ ಮಾವನ ಮೇಲೆ ತನ್ನ ಪ್ರತಾಪ ತೋರಿ, ಹಿಂಸಿಸಿದ ಪ್ರಕರಣದಲ್ಲಿ ನಗರದ ಸರ್ಕಾರಿ ಆಸ್ಪತ್ರೆಯೊಂದರ ವೈದ್ಯೆಯ ಮೇಲೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವೈದ್ಯೆಯನ್ನು ಪ್ರಿಯದರ್ಶಿನಿ ಎಂದು ಗುರುತಿಸಲಾಗಿದೆ. ವೈದ್ಯೆಯ ಮಾವ ನರಸಿಂಹಯ್ಯ ಎಂಬವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
2007 ರಲ್ಲಿ ನರಸಿಂಹಯ್ಯ ಅವರ ಪುತ್ರ ಮತ್ತು ಪ್ರಿಯದರ್ಶಿನಿ ಅವರ ವಿವಾಹ ನಡೆದಿತ್ತು. ಈಗ ಇಬ್ಬರೂ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣ ನ್ಯಾಯಾಲಯದಲ್ಲಿದೆ. ಆದರೆ ಕಳೆದ ಮಾರ್ಚ್ 10 ರಂದು ಪ್ರಿಯದರ್ಶಿನಿ ನಮ್ಮ ಮನೆಗೆ ಏಕಾಏಕಿ ನುಗ್ಗಿದ ಪ್ರಿಯದರ್ಶಿನಿ ಮತ್ತು ಅವರ ಮಕ್ಕಳು ನನಗೆ, ನನ್ನ ಹೆಂಡತಿ ಮತ್ತು ಪುತ್ರನ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಬೆದರಿಕೆ ಒಡ್ಡಿದ್ದಾರೆ ಎಂದು ದೂರುನಲ್ಲಿ ಹೇಳಲಾಗಿದೆ.
ಪ್ರಿಯದರ್ಶಿನಿ ತನ್ನ ಅತ್ತೆ ಮಾವನಿಗೆ ಹಿಂಸೆ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕೆಯ ಕುಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.