ವಿಜಯಪುರ: ಕಂಟ್ರಿ ಪಿಸ್ತೂಲ್ ಹೊಂದಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಹಾಲಿ ವಸ್ತಿ ಹವೇಲಿ ಗಲ್ಲಿಯ ನಯೀಮ್ ಸಿರಾಜ್ ಶಾಮಣ್ಣವರ, ಭವಾನಿ ನಗರದ ನಿಹಾಲ್ ಯಾನೆ ನೇಹಲ್ ಮಹಿಬೂಬಸಾಬ ತಾಂಬೋಳಿ, ಯೋಗಾಪುರ ಕಾಲನಿಯ ಸಿದ್ದು ಯಾನೆ ಸಿದ್ಯಾ ಗುರುಪಾದ ಮೂಡಲಗಿ ಯಾನೆ ಮೂಡಂಗಿ ಎಂದು ಗುರುತಿಸಲಾಗಿದೆ.
ಆರೋಪಿ ನಯೀಮ್ ಸಿರಾಜ್ ಎಂಬಾತ ಕಂಟ್ರಿ ಪಿಸ್ತೂಲ್ ಹೊಂದಿರುವ ಖಚಿತ ಮಾಹಿತಿಯನ್ನು ಆಧರಿಸಿ ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಕಂಟ್ರಿ ಪಿಸ್ತೂಲ್, 1 ಜೀವಂತ ಗುಂಡು ಜಪ್ತಿ ಮಾಡಿದ್ದಾರೆ. ಆ ಬಳಿಕ ಈತ ನೀಡಿದ ಮಾಹಿತಿಯ ಅನುಸಾರ ನಿಹಾಲ್‌ನನ್ನು ವಶಕ್ಕೆ ಪಡೆದು ಆತನಿಂದ 3 ಕಂಟ್ರಿ ಪಿಸ್ತೂಲ್, 4 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಸಿದ್ದುವನ್ನು ವಶಪಡಿಸಿಕೊಂಡು ಆತನಿಂದ ಕಂಟ್ರಿ ಪಿಸ್ತೂಲ್, 1 ಸಜೀವ ಗುಂಡು ವಶಕ್ಕೆ ಪಡೆಯಲಾಗಿದೆ.