ಹೊಸಕೋಟೆ: ಕಾಪಾಡಬೇಕಾದ ತಂದೆಯೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಕೃತಿ ಮೆರೆದ ಘಟನೆ ನಡೆದಿದೆ.
ಆರೋಪಿಯನ್ನು ಮಂಜುನಾಥ್ ಎಂದು ಗುರುತಿಸಲಾಗಿದೆ.
ಮಂಜುನಾಥ್‌ಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗ ಇದ್ದು, ಈತ ತನ್ನ ಹಿರಿಯ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿ, ಇದನ್ನು ಯಾರಿಗಾದರೂ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುವ ಘಟನೆ ನಡೆದಿದೆ.
ತಂದೆಯ ಕಿರುಕುಳ ತಾಳಲಾರದೆ ಯುವತಿ ಪಿ.ಜಿ.ಯಲ್ಲಿ ಆಶ್ರಯ ಪಡೆದಿದ್ದು, ಜೀವ ಭಯದಿಂದ ಆಕೆ ಮನೆಯಿಂದಲೇ ದೂರ ಉಳಿದಿದ್ದಳು.
ಈ ಪ್ರಕರಣ ಸದ್ಯ ಹೊಸಕೋಟೆ ಪೊಲೀಸ್ ಠಾಣಾ ಮೆಟ್ಟಿಲೇರಿದ್ದು, ತನಗೆ ನ್ಯಾಯ ಒದಗಿಸುವಂತೆ ಸಂತ್ರಸ್ತೆ ಮನವಿ ಮಾಡಿದ್ದಾಳೆ.
ಆರೋಪಿ ಮಂಜುನಾಥನನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.