ಮಂಗಳೂರು: ರಸ್ತೆ ಅಗಲೀಕರಣ ಮಾಡುವುದಗಿ ಖಾಸಗಿ ಜಾಗಕ್ಕೆ ಸಂಬಂಧಿಸಿದ ಕಾಂಪೌಂಡ್ ಒಡೆದು ಹಾಕಿದ ಆರೋಪದಲ್ಲಿ ಗಣೇಶ್, ನವೀನ್ ಸೇರಿದಂತೆ 17 ಜನರ ಮೇಲೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಚ್ಚನಾಡಿಯ ವೈದ್ಯನಾಥ ನಗರದಲ್ಲಿ ರಸ್ತೆ ಅಗಲ ಮಾಡಲು ವಿಜೇತ್ ವಿಜೇಶ್ ಸಲ್ದಾನ ಅವರಿಗೆ ಸೇರಿದ ಕಾಂಪೌಡ್ ಅನ್ನು ಆರೋಪಿಗಳು ಜೆಸಿಬಿ ಸೇರಿದಂತೆ ಇನ್ನಿತರ ಆಯುಧಗಳ ಮೂಲಕ ಕೆಡವಿದ್ದಾರೆ. ಹಾಗೆಯೇ ಆರೋಪಿಗಳು ವಿಜೇಶ್ ಅವರ ಪತ್ನಿ ಜ್ಯೋತಿ ಅವರಿಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಕಾಂಪೌಂಡ್ ಕೆಡಹಲು ಸಂಬಂಧಿಸಿದಂತೆ ಯಾವುದೇ ಕಚೇರಿಯಿಂದ ಆರೋಪಿಗಳು ಆರ್ಡರ್ ಪತ್ರ ಸಹ ತಂದಿಲ್ಲ.
ಈ ಸಂಬಂಧ ವಿಜೇಶ್ ಪತ್ನಿ ಜ್ಯೋತಿ ಅವರು ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಮಾನಹಾನಿ ಪ್ರಕರಣವನ್ನೊಳಗೊಂಡ ಹಾಗೆ ಇನ್ನೂ ಅನೇಕ ಕಾಯ್ದೆಗಳನ್ವಯ ಕೇಸು ದಾಖಲಾಗಿದೆ.