ಮಂಗಳೂರು: ಪಿಜಿ ಬಗ್ಗೆ ಗೂಗಲ್‌ನಲ್ಲಿ ಉತ್ತಮವಾಗಿಲ್ಲ ಎಂದು ಸಿಂಗಲ್ ಸ್ಟಾರ್ ರೇಟಿಂಗ್ ಕೊಟ್ಟ ಇಂಜಿನಿಯರಿಂಗ್ ವಿದ್ಯಾರ್ಥಿಯ ಮೇಲೆ ಪಿಜಿ ಮಾಲೀಕ ಮತ್ತು ಆತನ ಗ್ಯಾಂಗ್ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕಲ್ಬುರ್ಗಿ ಜಿಲ್ಲೆಯ ವಿಕಾಸ್ ಎನ್ನುವ ವಿದ್ಯಾರ್ಥಿ ಮಂಗಳೂರಿನಲ್ಲಿ ಇಂಜಿನಿಯರಿಂಗ್ ಅಧ್ಯಯನ ಮಾಡುತ್ತಿದ್ದ. ಈತ ಕದ್ರಿ ದೇಗುಲದ ಬಳಿಯ ಕುಕ್ಕೆಶ್ರೀ ಬಾಯ್ಸ್ ಪಿಜಿಯ ವಿರುದ್ಧ ಅದು ಚೆನ್ನಾಗಿಲ್ಲ, ಶುಚಿಯಾಗಿಲ್ಲ, ಆಹಾರ ಚೆನ್ನಾಗಿಲ್ಲ ಎಂದೆಲ್ಲಾ ಹೇಳಿ ಸಿಂಗಲ್ ರೇಟಿಂಗ್ಸ್ ನೀಡಿದ್ದ. ಇದರಿಂದ ಉರಿದು ಬಿದ್ದ ಪಿಜಿ ಮಾಲೀಕ ವಿಕಾಸ್ ಮೇಲೆ ಹಲ್ಲೆ ನಡೆಸಿದ್ದಾನೆ.
ಆರು ತಿಂಗಳಿಂದ ಈತ ಇದೇ ಪಿಜಿಯಲ್ಲಿದ್ದು, ಇಲ್ಲಿನ ಆಹಾರದಲ್ಲಿ ಹುಳ ಬಿದ್ದದಿರುವುದು, ಶುಚಿತ್ವ ಇಲ್ಲದಿರುವುದು, ಕೆಟ್ಟ ಶೌಚಾಲಯ ಇರುವುದಾಗಿ ಹೇಳಿ ಸಿಂಗಲ್ ರೇಟಿಂಗ್ಸ್ ನೀಡಿದ್ದ. ಇದನ್ನು ಪಿಜಿ ಮಾಲೀಕ ಸಂತೋಷ್ ಎಂಬಾತ ವಿಕಾಸ್‌ಗೆ ಬೆದರಿಕೆ ಹಾಕಿ, ಕಾಮೆಂಟ್ ಅಳಿಸುವಂತೆ ಸೂಚಿಸಿದ್ದ. ಆದರೆ ವಿಕಾಸ್ ಕಾಮೆಂಟ್ ಡಿಲೀಟ್ ಮಾಡಿಲ್ಲ. ಇದರಿಂದ ಸಂತೋಷ್ ಮತ್ತು ಅವನ ತಂಡ ವಿಕಾಸ್ ಮೇಲೆ ಹಲ್ಲೆ ನಡೆಸಿದೆ.
ಇನ್ನು ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಲ್ಲಿ ಪೊಲೀಸರು ಕೈಯಿಂದ ಹಲ್ಲೆ ಮಾಡಿದ್ದಲ್ಲವೇ? ತೊಂದರೆ ಇಲ್ಲ ಎಂದು ಎಫ್‌ಐಆರ್ ದಾಖಲಿಸದೆ ಪೊಲೀಸರು ಹೇಳಿದ್ದಾರೆ.
ಇದಕ್ಕೆ ವಿಕಾಸ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ನಾವು ಪೊಲೀಸ್ ದೂರು ಕೊಟ್ಟಿದ್ದೇವೆ, ಆದರೆ ಕೈಯಲ್ಲಿ ಹಲ್ಲೆ ಮಾಡಿದ್ದಕ್ಕೆ ಕಂಪ್ಲೇಂಟ್ ರಿಜಿಸ್ಟರ್ ಮಾಡಿಲ್ಲ.. ನಮಗೇನೂ ಗೊತ್ತಿರಲಿಲ್ಲ. ವಿದ್ಯಾರ್ಥಿ ಸಂಘಟನೆಯವರದ್ದೂ ಪರಿಚಯ ಇಲ್ಲ. ಅಲ್ಲಿ ಪಿಜಿ ಏನೂ ಚೆನ್ನಾಗಿಲ್ಲ. ನಾನೂ ಅಲ್ಲಿದ್ದೆ. ಹಾಗಾಗಿ ಕಮೆಂಟ್ ಹಾಕಿದ್ದೆ. ಅದಕ್ಕೆ ಬಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾನೆ. ಅಲ್ಲಿನ ಪಿಜಿಯ ವ್ಯವಸ್ಥೆ ಎಷ್ಟು ಕ್ಲೀನ್ ಇದೆಯೆಂದು ವಿದ್ಯಾರ್ಥಿ ತನ್ನಲ್ಲಿದ್ದ ಫೋಟೋಗಳನ್ನು ಮಾಧ್ಯಮಕ್ಕೆ ನೀಡಿದ್ದಾನೆ.