ಚಿಕ್ಕಮಗಳೂರು: ಶೃಂಗೇರಿಯಲ್ಲಿ ಗಲಾಟೆಯಾಗಿದೆ. ಅದರಲ್ಲಿ ನನಗೆ ಗಂಭೀರ ಏಟಾಗಿದೆ. ದಯಮಾಡಿ ಬನ್ನಿ ಎಂದು ಕುಡುಕನೊಬ್ಬ ಆಂಬ್ಯುಲನ್ಸ್‌ಗೆ ಕರೆ ಮಾಡಿ, ಆತಂಕ ಸೃಷ್ಟಿ ಮಾಡಿದ ಘಟನೆ ನಡೆದಿದೆ.
ಮದ್ಯಪಾನ ಮಾಡಿದ್ದ ವ್ಯಕ್ತಿಯೊಬ್ಬ ಶೃಂಗೇರಿಯಲ್ಲಿ ಗಲಾಟೆಯಾಗಿದ್ದು, ನಾನು ಗಾಯಗೊಂಡಿದ್ದೇನೆ. ದಯಮಾಡಿ ಬಂದು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು 108 ಕ್ಕೆ ಕರೆ ಮಾಡಿ ಹೇಳಿದ್ದಾನೆ. ಶೃಂಗೇರಿಯಿಂದ 40 ಕಿಮೀ ದೂರದ ಬಾಳೆಹೊನ್ನೂರಿನಲ್ಲಿದ್ದ ಆಂಬ್ಯುಲನ್ಸ್ ಚಾಲಕ ಶೃಂಗೇರಿಗೆ ಬಂದಿದ್ದು, ಈ ಸಂದರ್ಭದಲ್ಲಿ ಕುಡುಕ ನನಗೇನೂ ಆಗಿಲ್ಲ, ಸಾಧ್ಯವಾದರೆ ನನ್ನನ್ನು ಹಿಡಿಯಿರಿ ನೋಡೋಣ ಎಂದು ಹೇಳಿದ್ದಾನೆ.
ಕುಡಿಕನ ಹುಚ್ಚಾಟದಿಂದ ಬೇಸತ್ತು ಆಂಬ್ಯುಲನ್ಸ್ ಚಾಲಕ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರಿಗೂ ಸಾಧ್ಯವಾದರೆ ನನ್ನನ್ನು ಹಿಡಿಯಿರಿ ನೋಡೋಣ ಎಂದು ಸವಾಲೆಸೆದಿದ್ದಾನೆ. ಕೊನೆಗೆ ಸ್ಥಳೀಯರೇ ಕುಡುಕನನ್ನು ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.