ಬೆಂಗಳೂರು: ಪೂಜೆಯ ಹೆಸರಿನಲ್ಲಿ ಮಹಿಳೆಯೋರ್ವರಿಂದ ಹಣ ಮತ್ತು ಚಿನ್ನಾಭರಣ ಪಡೆದುಕೊಂಡು ವಂಚಿಸಿ, ಲೈಂಗಿಕ ಕಿರುಕುಳ ನೀಡಿದ ಗುರೂಜಿ ಮತ್ತು ಆತನ ಶಿಷ್ಯನ ವಿರುದ್ಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಆರೋಪಿಗಳನ್ನು ಡಾ. ಕಿರಣ್ ಕುಮಾರ್ ಗುರೂಜಿ ಮತ್ತು ಆತನ ಶಿಷ್ಯ ಲೋಹಿತ್ ಎಂದು ಗುರುತಿಸಲಾಗಿದೆ.
ಮಹಿಳೆಯ ಪತಿ ಮತ್ತು ಇಬ್ಬರು ಪುತ್ರರು ವಿದೇಶದಲ್ಲಿದ್ದಾರೆ. ನಿಮ್ಮ ಕುಟುಂಬದ ಮೇಲೆ ವಾಮಾಚಾರ ಪ್ರಯೋಗವಾಗಿದ್ದು, ಇದರಿಂದ ನಿಮ್ಮ ಪತಿಗೆ ಅಪಾಯವಿದೆ ಎಂದು ಗುರೂಜಿ ಮಹಿಳೆಯನ್ನು ನಂಬಿಸಿದ್ದಾರೆ. ಅಲ್ಲದೆ ಅದಕ್ಕೆ ಸಂಬಂಧಿಸಿದ ಹಾಗೆ ಪೂಜೆ ಮಾಡುವಂತೆ ಸಲಹೆ ನೀಡಿದ್ದು, ಅದಕ್ಕಾಗಿ 1 ಕೋಟಿಗೂ ಅಧಿಕ ಹಣ, 100 ಗ್ರಾಂ.ಗೂ ಅಧಿಕ ಚಿನ್ನ ಪಡೆದು ವಂಚಿಸಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಯಾವ ಪೂಜೆ ಮಾಡಿದರೂ ಮನಸ್ಸಿಗೆ ನೆಮ್ಮದಿ ಸಿಕ್ಕಿಲ್ಲ. ಹಾಗಾಗಿ ನೀಡಿದ ಹಣ ಮತ್ತು ಚಿನ್ನವನ್ನು ಮಹಿಳೆ ಗುರೂಜಿ ಬಳಿಯಿಂದ ವಾಪಸ್ಸು ಕೇಳಿದ್ದು, ಈ ಸಂದರ್ಭದಲ್ಲಿ ಮಹಿಳೆಗೆ ಗುರೂಜಿ ಮತ್ತು ಆತನ ಶಿಷ್ಯ ಲೈಂಗಿಕ ಕಿರುಕುಳ ನೀಡಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಮಹಿಳೆ ಕೇಸು ನೀಡಿರುವುದಾಗಿದೆ.