ದೆಹಲಿ: ಜಮ್ಮು ಕಾಶ್ಮೀರ ಹಿಂದೆ, ಇಂದು ಮತ್ತು ಮುಂದೆಯೂ ಭಾರತದ ಅವಿಭಾಜ್ಯ ಅಂಗ. ಪಾಕ್ ಆಕ್ರಮಿತ ಕಾಶ್ಮೀರವನ್ನು ಕೂಡಲೇ ತೆರವು ಮಾಡಬೇಕು ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಹೇಳಿದೆ.
ಭಾರತದ ಪರ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ, ರಾಯಭಾರಿಯಾಗಿರುವ ಪರ್ವತನೇನಿ ಹರೀಶ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಶಾಂತಿ ಕಾರ್ಯಾಚರಣೆಗಳಲ್ಲಿ ಹೊಂದಾಣಿಕೆಯನ್ನು ಹೆಚ್ಚು ಮಾಡುವ ಕುರಿತು ಪ್ರಸ್ತಾಪ ಮಾಡುವ ಸಮಯದಲ್ಲಿ ಈ ಅಂಶವನ್ನು ತಿಳಿಸಿದ್ದಾರೆ.
ಭಾರತದ ಅವಿಭಾಜ್ಯ ಅಂಗ ಜಮ್ಮು ಕಾಶ್ಮೀರವನ್ನು ಪಾಕಿಸ್ತಾನ ಆಕ್ರಮಿಸಿಕೊಂಡಿದೆ. ಅದನ್ನು ಕೂಡಲೇ ತೆರವು ಮಾಡಬೇಕು. ಜಮ್ಮು ಕಾಶ್ಮೀರದ ಮೇಲೆ ಪಾಕಿಸ್ತಾನದ ಪುನರಾವರ್ತಿತ ಕಾನೂನುಬಾಹಿರ ಹಕ್ಕುಗಳು, ಉಲ್ಲೇಖಗಳನ್ನು ದೃಢೀಕರಿಸಲಾಗುವುದಿಲ್ಲ. ಹಾಗೆಯೇ, ಗಡಿಯಾಚೆಗಿನ ಉಗ್ರವಾದವನ್ನು ಸಹ ಭಾರತ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.