ಖತರ್ನಾಕ್ ಟೀಚರಮ್ಮನ ‘ಒಂದು ಮುತ್ತಿನ ಕಥೆ’
ಬೆಂಗಳೂರು: ಮಗುವನ್ನು ಪ್ರೀ ಸ್ಕೂಲ್‌ಗೆ ಕರೆದುಕೊಂಡು ಹೋಗಿ ಅಲ್ಲಿನ ಟೀಚರ್ ಬಲೆಗೆ ಬಿದ್ದಿದ್ದ ವ್ಯಕ್ತಿಯೋರ್ವರಿಗೆ ಟೀಚರ್ ಬ್ಲಾಕ್ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಇದರಿಂದ ಬೇಸತ್ತ ಸಂತ್ರಸ್ತ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಮಗುವನ್ನು ಪ್ರೀಸ್ಕೂಲ್‌ಗೆ ಕರೆದೊಯ್ಯುತ್ತಿದ್ದ ಉದ್ಯಮಿಗೆ ಆ ಶಾಲೆಯ ಟೀಚರ್ ಶ್ರೀದೇವಿ ಜೊತೆ ಸ್ನೇಹ ಬೆಳೆದಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಶ್ರೀದೇವಿ ಪ್ರೀಸ್ಕೂಲ್ ನಿರ್ವಹಣೆಗೆ ಆ ಉದ್ಯಮಿಯ ಬಳಿ 2 ಲಕ್ಷ ರೂ. ಸಾಲ ಪಡೆದಿದ್ದಾಳೆ. ಆ ಬಳಿಕ ಕಳೆದ ನವೆಂಬರ್‌ನಲ್ಲಿ ತನ್ನ ತಂದೆಗೆ ಹುಷಾರಿಲ್ಲ ಎಂದು ಹೇಳಿ ಆ ಉದ್ಯಮಿಯಿಂದ ಮತ್ತೆ 2 ಲಕ್ಷ ಹಣ ಪಡೆದಿದ್ದಾಳೆ. ಉದ್ಯಮಿ ಕೊಟ್ಟ ಸಾಲ ಹಿಂದಕ್ಕೆ ಕೇಳಿದಾಗ ಆತನಲ್ಲಿ ಪ್ರಿಸ್ಕೂಲ್‌ನ ಪಾರ್ಟ್ನರ್ ಆಗಿ ಎಂದಿದ್ದಾಳೆ.
ಇದರ ನಡುವೆಯೇ ಉದ್ಯಮಿ ಜೊತೆಗೆ ಟೀಚರ್ ಸುತ್ತಾಟ ಸಹ ಆರಂಭ ಮಾಡಿದ್ದಳು. ಟೀಚರ್ ಜೊತೆಗೆ ಮಾತನಾಡುವುದಕ್ಕೆಂದೇ ಉದ್ಯಮಿ ಹೊಸ ಸಿಮ್, ಫೋನ್ ಸಹ ಖರೀದಿ ಮಾಡಿದ್ದರು.
ಕಳೆದ ಜನವರಿ ತಿಂಗಳಿನಲ್ಲಿ ಉದ್ಯಮಿ ಟೀಚರ್ ಬಳಿ ಕೊಟ್ಟ ಹಣ ಮರಳಿ ಕೇಳಿದ್ದು, ಈ ವೇಳೆ ಆಕೆ ಅವರ ಮನೆಗೆಯೇ ತೆರಳಿ ಸಲುಗೆಯಿಂದ ಮಾತನಾಡಿ, ತುಟಿಗೆ ತುಟಿ ಇಟ್ಟು ಮುತ್ತಿಟ್ಟು 50 ಸಾವಿರ ರೂ. ಕಿತ್ತುಕೊಂಡಿದ್ದಾಳೆ. ಜೊತೆಗೆ ನಿನ್ನ ಜೊತೆಗೆ ಸಂಪರ್ಕದಲ್ಲಿ ಇರುತ್ತೇನೆ ಎಂದೂ ಹೇಳಿದ್ದಾಳೆ.
ಆ ಬಳಿಕ ಇದನ್ನೇ ಕಾಯಕವಾಗಿ ಮಾಡಿಕೊಂಡ ಟೀಚರ್ ಮತ್ತೆ 15 ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟಿದ್ದಾಳೆ. ಹೀಗೆಯೇ ಉದ್ಯಮಿಯ ಬಳಿ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಇದರಿಂದ ಬೇಸತ್ತ ಉದ್ಯಮಿ ಆಕೆಯ ಜೊತೆ ಸಂಪರ್ಕವನ್ನೇ ಕಡಿತ ಮಾಡಿಕೊಂಡಿದ್ದರು. ಆದರೆ ಟೀಚರ್ ಉದ್ಯಮಿಯ ಪತ್ನಿಗೆ ಕರೆ ಮಾಡಿ ‘ಮಕ್ಕಳ ಟಿಸಿ ಕೊಡುವುದಿದೆ. ನಿಮ್ಮ ಪತಿಯನ್ನು ಪ್ರಿಸ್ಕೂಲ್‌ಗೆ ಕಳುಹಿಸಿ ಎಂದು ಹೇಳಿದ್ದಾಳೆ.
ಅದರಂತೆ ಉದ್ಯಮಿ ಸ್ಕೂಲ್‌ಗೆ ಹೋದಾಗ ಶ್ರೀದೇವಿ ಜೊತೆ ಸಾಗರ್ ಮತ್ತು ಗಣೇಶ್ ಎಂಬ ಯುವಕರು ಇದ್ದು, ಅವರು ಟೀಚರ್ ಜೊತೆ ತಿರುಗಾಟ ನಡೆಸಿದ್ದಕ್ಕೆ ಅವಾಜ್ ಹಾಕಿದ್ದಾರೆ. ಈ ಸಂದರ್ಭದಲ್ಲಿ ಉದ್ಯಮಿ ಆಕೆಗೆ ಬಾಯ್‌ಫ್ರೆಂಡ್ ಇರುವ ವಿಷಯ ನನಗೆ ತಿಳಿಯದು. ನಾನಾಕೆಯ ಜೊತೆಯಲ್ಲಿ ಕೇವಲ ಆಹಾರ ಸೇವನೆ ಮಾಡಿದ್ದಷ್ಟೇ ಎಂದು ಹೇಳಿದ್ದಾರೆ.
ಆ ಬಳಿಕವೂ ಹದಿನೈದು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದು, ನೀಡದೇ ಹೋದಲ್ಲಿ ತಮ್ಮಿಬ್ಬರ ನಡುವಿನ ಸಂದೇಶಗಳು, ವಿಡಿಯೇಗಳನ್ನು ಉದ್ಯಮಿಯ ಪತ್ನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಕೊನೆಗೆ ಉದ್ಯಮಿ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೇಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.