ಶಿವಮೊಗ್ಗ: ಗೆಳೆಯರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ವಿರುಪಿನಕೊಪ್ಪ ಕ್ಯಾಂಪ್‌ನಲ್ಲಿ ನಡೆದಿದೆ. ಹತ್ಯೆಯಾದವನನ್ನು ತ್ಯಾವರೆಕೊಪ್ಪದ ದೇವರಾಜ್ ಎಂದು ಗುರುತಿಸಲಾಗಿದ್ದು, ಆತನ ಗೆಳೆಯನಾಗಿದ್ದ ವೆಂಕಟೇಶ್ ಎನ್ನುವವನೇ ಈ ಕೃತ್ಯದ ಆರೋಪಿಯಾಗಿದ್ದಾನೆ. ವೈಯಕ್ತಿಕ ಕಾರಣಕ್ಕೆ ದೇವರಾಜ್ ಮತ್ತು ವೆಂಕಟೇಶ್ ಕಿತ್ತಾಡಿಕೊಂಡಿದ್ದು, ಜಗಳ ವಿಕೋಪಕ್ಕೆ ಹೋಗಿ ಗುದ್ದಲಿ ಯಿಂದ ದೇವರಾಜ್‌ನ ತಲೆಗೆ ವೆಂಕಟೇಶ್ ಹೊಡೆದಿದ್ದಾನೆ. ದೇವರಾಜ್ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.