ಬೆಂಗಳೂರು: ಮಹಿಳೆಯರು ತಮ್ಮ ಬ್ಯಾಗ್‌ಗಳಲ್ಲಿ ತ್ರಿಶೂಲಗಳನ್ನು ಇರಿಸಿಕೊಳ್ಳಬೇಕು. ಆ ತ್ರಿಶೂಲದಿಂದ ಅತ್ಯಾಚಾರಿಗಳು, ಕೊಲೆಗಡುಕರು, ಲವ್ ಜಿಹಾದ್ ಮಾಡುವವರನ್ನು ಚುಚ್ಚಿ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಎ.18 ಕ್ಕೆ ನೇಹಾ ಹಿರೇಮಠ್ ಹತ್ಯೆಯಾಗಿ ಒಂದು ವರ್ಷವಾಗುತ್ತದೆ. ಆ ದಿನದಂದು ಒಂದು ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆಯನ್ನು ಶ್ರೀರಾಮಸೇನೆ ನೀಡಲಿದೆ ಎಂದಿದ್ದಾರೆ.
ಮಹಿಳೆಯರು ತಮ್ಮ ಬ್ಯಾಗ್‌ಗಳಲ್ಲಿ ತ್ರಿಶೂಲಗಳನ್ನು ಇಟ್ಟುಕೊಳ್ಳಲಿ. ಯಾರಾದರೂ ಹಾನಿ ಮಾಡಲು ಬಂದರೆ ಚುಚ್ಚಿ. ಅತ್ಯಾಚಾರಿಗಳು, ಕೊಲೆಗಡುಕರು, ಲವ್ ಜಿಹಾದ್ ಮಾಡುವವರಿಗೆ ಚುಚ್ಚಿ. ಮಹಿಳೆಯರ ರಕ್ಷಣೆಯನ್ನು ಕಾಂಗ್ರೆಸ್ ಮಾಡುವುದಿಲ್ಲ. ಮುಸ್ಲಿಮರ ರಕ್ಷಣೆಯನ್ನು ಕಾಂಗ್ರೆಸ್ ಮಾಡುತ್ತದೆ. ಕಾಂಗ್ರೆಸ್ ಅವರ ಮತಕ್ಕಾಗಿ ಜೊಲ್ಲು ಸುರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.