ಬೆಂಗಳೂರು: ಬಿಜೆಪಿ ಕಾರ್ಯಕರ್ತರೊಬ್ಬರು ತಮ್ಮ ಮೇಲೆ ಎಫ್‌ಐಆರ್ ದಾಖಲಾದ ಕಾರಣಕ್ಕೆ ಮನನೊಂದು ಪಕ್ಷದ ಕಚೇರಿಯಲ್ಲೇ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗವಾರದಲ್ಲಿ ನಡೆದಿದೆ.
ವಿನಯ್ ಸೋಮಯ್ಯ ಎನ್ನುವವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಆತ್ಮಹತ್ಯೆಗೆ ಶರಣಾಗುವುದಕ್ಕೂ ಮೊದಲು ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಡೆತ್ ನೋಟ್ ಪೋಸ್ಟ್ ಮಾಡಿದ್ದಾರೆ. ರಾಜಕೀಯ ಪ್ರೇರಿತ ಎಫ್‌ಐಆರ್‌ನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅವರು ಬರೆದುಕೊಂಡಿದ್ದಾರೆ. ವಿನಯ್ ಅವರು ಶಾಸಕ ಪೊನ್ನಣ್ಣ ಅವರ ಬಗ್ಗೆ ಅಪಹಾಸ್ಯ ಮಾಡಿ ಪೋಸ್ಟ್ ಹಾಕಿದ್ದಾಗಿಯೂ ಆರೋಪ ಕೇಳಿ ಬಂದಿತ್ತು.
ಅದೇ ಕಾರಣಕ್ಕೆ ವಿನಯ್ ವಿರುದ್ಧ ಕಾಂಗ್ರೆಸ್ ಪಕ್ಷದ ತನ್ನೀರ ಮೈನಾ ಕೇಸು ದಾಖಲಿಸಿದ್ದರು. ಇದರಿಂದ ವಿನಯ್ ಅವರ ಬಂಧನವೂ ಆಗಿತ್ತು. ಇದರಿಂದಾಗಿ ನೊಂದಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.