ಉಡುಪಿ: ಯುವತಿಯೋರ್ವಳ ಅಪಹರಣ ಪ್ರಕರಣದಲ್ಲಿ ಪೋಷಕರು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಜೀನ ಮೆರಿಲ್ ಮತ್ತು ಅಕ್ರಂ ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯಾಧೀಶರ ಮುಂದೆ ತನ್ನ ಅಭಿಪ್ರಾಯ ತಿಳಿಸಿರುವ ಜೀನ, ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನನ್ನ ಸ್ವ ಇಚ್ಛೆಯಿಂದ ಅಕ್ರಂ ಜೊತೆಗೆ ಹೋಗಿದ್ದಾಗಿ ಹೇಳಿದ್ದಾಳೆ.
ಇದೇ ವೇಳೆ ಯುವತಿಯ ತಾಯಿ ಮನವಿ ಮಾಡಿಕೊಂಡಂತೆ, ಆಕೆಯ ಜೊತೆ ಮಾತನಾಡುವುದಕ್ಕೂ ತಾಯಿಗೆ ನ್ಯಾಯಾಧೀಶರು ತಮ್ಮ ಕೊಠಡಯಲ್ಲೇ ನ್ಯಾಯಾಧೀಶರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಈ ಮಾತುಕತೆಯ ಬಳಿಕವೂ ಆಕೆ ತನ್ನ ತಾಯಿಯ ಜೊತೆಗೆ ಹೋಗಲು ಒಪ್ಪಿಕೊಂಡಿಲ್ಲ. ಹಾಗೆಯೇ ತಾನು ಅಕ್ರಮ ಜೊತೆಗೆ ಎ. 19 ರಂದು ರಿಜಿಸ್ಟರ್ ವಿವಾಹವಾಗಲಿದ್ದು, ಆ ಬಳಿಕ ತಾಯಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದಾಳೆ. ಜೊತೆಗೆ ತಾಯಿಯೊಂದಿಗೆ ತಾನು ಮುಂದೆಯೂ ಉತ್ತಮ ಬಾಂಧವ್ಯ ಹೊಂದುವುದಾಗಿ ಹೇಳಿದ್ದಾಳೆ.
ಈ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಎ.22 ಕ್ಕೆ ಮುಂದೂಡಿದೆ.