ಬೆಳಗಾವಿ: ಪ್ರಿಯಕರನಿಂದ ಗಂಡನನ್ನು ಹತ್ಯೆ ಮಾಡಿಸಿ, ಶವದ ಮುಂದೆ ಕಣ್ಣೀರಿಡುವ ನಾಟಕವಾಡಿದ ಪತ್ನಿಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಖಾನಾಪುರತಾಲೂಕಿನ ಬಲೋಗಿ ಗ್ರಾಮದ ಶೈಲಾ ಶಿವನಗೌಡ ಪಾಟೀಲ ಎಂದು ಗುರುತಿಸಲಾಗಿದೆ. ಮೃತನನ್ನು ಶಿವನಗೌಡ ಪಾಟೀಲ ಎಂದು ಗುರುತಿಸಲಾಗಿದೆ.
ಶಿವನಗೌಡ ಪಾಟೀಲನನ್ನು ಕೊಲೆ ಮಾಡಲಾಗಿತ್ತು. ಕೊಲೆಮಾಜಿ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿದ್ದ ಆರೋಪಿ ರುದ್ರಪ್ಪನನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ ಆತನ ಪತ್ನಿ ಶೈಲಾ ಅಣತಿಯಂತೆ ಕೊಲೆ ಮಾಡಿರುವುದಾಗಿ ತಿಳಿಸಿದ್ದ.
ಶೈಲಾ ಮತ್ತು ಆಕೆಯ ಪ್ರಿಯಕರ ರುದ್ರಪ್ಪ ಹೊಸಟ್ಟಿ ನಡುವೆ ಅಕ್ರಮ ಸಂಬಂಧ ಇತ್ತು. ಈ ಕಾರಣದಿಂದ ಪತಿಯನ್ನು ಕೊಲ್ಲುವಂತೆ ರುದ್ರಪ್ಪನಿಗೆ ಹೇಳಿದ್ದಳು. ರುದ್ರಪ್ಪ ಶಿವನಗೌಡನಿಗೆ ಕಂಠಪೂರ್ತಿ ಕುಡಿಸಿ ಆತನನ್ನು ಕೊಲೆ ಮಾಡಿದ್ದ. ಆ ಬಳಿಕ ಶೈಲಾಗೆ ಕರೆ ಮಾಡಿ ತಿಳಿಸಿದ್ದ. ಆಗ ಶೈಲ ಪತಿಯ ಮೃತದೇಹವನ್ನು ವಿಡಿಯೋ ಕಾಲ್ ಮೂಲಕ ತೋರಿಸುವಂತೆ ಹೇಳಿದ್ದಾಳೆ. ಆದರೆ ನೆಟ್ವರ್ಕ್ ಸಮಸ್ಯೆಯಿಂದ ಅದು ಸಾಧ್ಯವಾಗಿಲ್ಲ.
ಆ ಬಳಿಕ ಪತಿಯ ಶವದ ಮುಂದೆ ಶೈಲಾ ಗೋಳಾಡುವ ನಾಟಕವಾಡಿದ್ದಳು. ಆದರೆ ಆರೋಪಿ ರುದ್ರಪ್ಪನ ಮೊಬೈಲ್ ಕರೆಗಳ ದಾಖಲೆ ನೋಡಿದ ಪೊಲೀಸರಿಗೆ ಶೈಲಾ ಈ ಕೃತ್ಯದಲ್ಲಿ ಭಾಗಿಯಾಗಿದ್ದು ದೃಢಪಟ್ಟಿದೆ. ಸದ್ಯ ಶೈಲಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ.