ಮಂಗಳೂರು: ಯಾರೋ ಮಾಟ, ಮಂತ್ರ ಮಾಡಿರುವುದಾಗಿ ಹೇಳಿ ಮಹಿಳೆಯೊಬ್ಬರಿಗೆ ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿ, ಒಂದು ಲಕ್ಷ ರೂ. ಪಡೆದು ವಂಚಿಸಿದ ಆರೋಪಿ ಕೂಳೂರು ಉಸ್ತಾದ್ ಗುರುವಾಯನಕೆರೆ ನಿವಾಸಿ ಜಿ. ಅಬ್ದುಲ್ ಕರೀಮ್‌ನನ್ನು ನಗರದ ಮಹಿಳಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಿಳೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಅವರಿಗೆ ಆರೋಪಿ ಕರೀಮ್‌ನಿಂದ ಚಿಕಿತ್ಸೆ ಪಡೆಯಲು ಸಂಬಂಧಿಕರು ಸೂಚಿಸಿದ್ದರು. ಅದರಂತೆ ಆಕೆ ಆತನ ಬಳಿ ತೆರಳಿದಾಗ ಅವರ ಮೇಲೆ ಮಾಟ – ಮಂತ್ರ ಪ್ರಯೋಗವಾಗಿದೆ. ಅದನ್ನು ನಿವಾರಿಸುವ ಚಿಕಿತ್ಸೆ ನೀಡುವುದಾಗಿ ಹೇಳಿ ಆಗಾಗ ಮನೆಗೆ ಕರೆಸಿಕೊಳ್ಳುತ್ತಿದ್ದ. ಆಕೆ ತಮ್ಮ ಅಕ್ಕನ ಜೊತೆಗೆ ಹೋದಾಗ ಹಲವು ಬಾರಿ ಕುರಾನ್ ಓದಿಸುತ್ತಿದ್ದ.
ಆದರೆ ಒಂದು ಬಾರಿ ಮಹಿಳೆಯ ಅಕ್ಕ ಜೊತೆಗಿರದೆ ಆಕೆ ಒಬ್ಬರೇ ಅಲ್ಲಿಗೆ ಹೋಗಿದ್ದರು. ಆಗ ಆತ ಆಕೆಯ ಮೈ ಕೈ ಮುಟ್ಟಿ ಕಿರುಕುಳ ನೀಡಿದ್ದ. ಹಾಗೆಯೇ ಮಹಿಳೆಯಿಂದ ಹಣ ಪಡೆದಿದ್ದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.