ಮಂಗಳೂರು: ಕೆಲ ಸಮಯದ ಹಿಂದೆ ನಡೆದಿದ್ದು ಫರಂಗಿಪೇಟೆಯ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ RSS ಹಿರಿಯ ನಾಯಕ ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿದ್ದಾರೆ.
ದಿಗಂತ್ ನಾಪತ್ತೆಯ ಹಿಂದೆ ಯಾವುದೋ ಗಾಂಜಾ ಗ್ಯಾಂಗ್ ಕೈವಾಡ ಇದೆ. ಪೊಲೀಸರು ವ್ಯವಸ್ಥಿತ ರೀತಿಯಲ್ಲಿ ಈ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. .ನಮ್ಮ ನಾಯಕರೂ ಸಹ ಪೊಲೀಸರು ಹೇಳುವುದನ್ನು ನಂಬಿ ಪ್ರಕರಣ ಕೊನೆಗೊಳಿಸಿದ್ದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪೊಲೀಸರು ದಿಗಂತ್ ಪೋಷಕರನ್ನು ತಾವು ಹೇಳಿದಂತೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಪತ್ತೆಯಾದ ದಿಗಂತ್‌ನನ್ನು ಪೊಲೀಸರು ರಿಮ್ಯಾಂಡ್ ಹೋಂಗೆ ಕೊಂಡೊಯ್ದಿದ್ದರು. ದಿಗಂತ್ ಹೆತ್ತವರು ಅಲ್ಲಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಪೊಲೀಸರು ಸಹ ಉಪಸ್ಥಿತರಿದ್ದು, ತಾವು ಹೇಳಿದಂತೆ ಕೇಳಬೇಕು ಎಂದು ದಿಗಂತ್‌ಗೆ ಒತ್ತಾಯಿಸಿದ್ದರು ಎಂದು ಹೇಳಿದ್ದಾರೆ.
ಹಾಗೆಯೇ ದಿಗಂತ್ ತಾನು ಪರೀಕ್ಷೆಗೆ ಹೆದರಿ ಓಡಿ ಹೋಗಿದ್ದಾಗಿ ಹೇಳಿದ್ದಾನೆ ಎಂದು ಪೊಲೀಸರು ಪೋಷಕರಿಗೆ ತಿಳಿಸಿದ್ದಾರೆ. ಆದರೆ ಆತ ಉಡುಪಿಯಲ್ಲಿ ಸಿಕ್ಕಿದಾಗ ತನ್ನನ್ನು ಯಾರೋ ಅಪಹರಿಸಿರುವುದಾಗಿ ಹೇಳಿದ್ದ. ಆತ ಬೈಕ್ ಮೂಲಕ ಹೋಗುತ್ತಾನೆ. ಆ ಬೈಕ್ ಯಾರದ್ದು ಎಂದು ಪೊಲೀಸರು ಪತ್ತೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆಗೆ ಹೆದರಿ ಓಡುವುದಾದರೆ ಕಾಲೇಜಿನಿಂದಲೇ ಓಡಿ ಹೋಗಬಹುದಿತ್ತು. ಮನೆಗೆ ಬಂದು ಏಕೆ ಓಡಿ ಹೋಗುತ್ತಿದ್ದ?, ಚಪ್ಪಲಿ ಮತ್ತು ಮೊಬೈಲ್ ಬಿಟ್ಟು ಏಕೆ ಹೋಗಿದ್ದ ಎಂದು ಪ್ರಶ್ನೆ ಮಾಡಿದ್ದಾರೆ. ಈ ಎಲ್ಲಾ ಘಟನೆಯ ಹಿಂದೆ ಗಾಂಜಾ ಗ್ಯಾಂಗ್ ಕೈವಾಡ ಇದೆ ಎಂದು ಅವರು ಆರೋಪಿಸಿದ್ದಾರೆ. ನನಗೂ ಗಾಂಜಾ ಗ್ಯಾಂಗ್ ತೊಂದರೆ ಮಾಡುವ ಸಾಧ್ಯತೆ ಇದ್ದು, ನಾನು ಅದ್ಯಾವುದನ್ನೂ ಕೇರ್ ಮಾಡಲ್ಲ ಎಂದಿದ್ದಾರೆ.