ಬೆಳ್ತಂಗಡಿ: ಹಿಂದುತ್ವವಾದಿ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಮಾಸ್ಟರ್ ಮೈಂಡ್ ಆರೋಪಿ ಶಾಫಿ ಬೆಳ್ಳಾರೆಗೆ ಬೆಳ್ತಂಗಡಿ ನ್ಯಾಯಾಲಯದ ಸಮೀಪದಲ್ಲೇ ಯುವಕನೊಬ್ಬ ಹಣೆಗೆ ಮುತ್ತಿಟ್ಟ ವಿಡಿಯೋ ಒಂದು ವೈರಲ್ ಆಗಿದ್ದು,ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದಲ್ಲಿ ಈತ ಪರಪ್ಪನ ಅಗ್ರಹಾರ ಸೇರಿದ್ದು, ಈತನಿಗಿನ್ನೂ ಜಾಮೀನು ಸಿಕ್ಕಿಲ್ಲ. ಬೇರೆ ಪ್ರಕರಣಗಳಲ್ಲೂ ಆರೋಪಿಯಾಗಿರುವ ಈತನನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದ ಹಾಗೆ ಬಾಡಿ ವಾರಂಟ್ ಮೂಲಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬೆಳ್ತಂಗಡಿ ನ್ಯಾಯಾಲಯಕ್ಕೆ ತಂದು ಹಾಜರು ಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಯುವಕನೊಬ್ಬ ಶಾಫಿಯ ಹಣೆಗೆ ಮುತ್ತಿಟ್ಟಿದ್ದಾನೆ. ಸದ್ಯ ಮುತ್ತಿಟ್ಟ ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಯುವಕ ಉಜಿರೆ ನಿವಾಸಿ ಎಂದು ತಿಳಿದು ಬಂದಿದೆ.