ಬೆಂಗಳೂರು: ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ಇದೀಗ ಎರಡನೇ ಬಾರಿ ಜಾಮೀನು ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಾಲಯ, ಸೂಕ್ತ ಕಾರಣಗಳಿಲ್ಲದೆ ನಿಮಗೆ ಹೇಗೆ ಜಾಮೀನು ನೀಡುವುದು. ಇತರ ಅತ್ಯಾಚಾರ ಆರೋಪಿಗಳ ವಿಚಾರಣೆಗೆ ತಡೆಯಾಜ್ಞೆ ಇದೆ ಎಂದ ಮಾತ್ರಕ್ಕೆ ನಿಮಗೆ ಜಾಮೀನು ನೀಡಬೇಕೆಂದೇನೂ ಇಲ್ಲ ಎಂದು ಹೇಳಿದೆ.
ಪ್ರಜ್ವಲ್ ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದ ಹಾಗೆ ಎರಡನೇ ಬಾರಿ ಜಾಮೀನಿಗೆ ಅರ್ಜಿ ಹಾಕಿದ್ದು, ಈ ಪ್ರಕರಣ 2021 ರಲ್ಲಿ ನಡೆದಿದ್ದು, 3 ವರ್ಷಗಳ ಬಳಿಕ ದೂರು ನೀಡಲಾಗಿದೆ. ದೂರು ನೀಡಲಾಗಿರುವುದು ವಿಳಂಬವಾದದ್ದಕ್ಕೆ ಯಾವುದೇ ರೀತಿಯ ವಿವರಣೆ ನೀಡಲಾಗಿಲ್ಲ. ಆದ್ದರಿಂದ ಪ್ರಜ್ವಲ್ ರೇವಣ್ಣ ಹೀಗೆಯೇ ಮುಂದುವರೆಯಲು ಹೇಗೆ ಸಾಧ್ಯ ಎಂದು ಕೇಳಿದ್ದಾರೆ.
ಸರ್ಕಾರಿ ವಿಶೇಷ ಅಭಿಯೋಜಕರು ವಾದ ಮಂಡಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದ ಬಳಿಕ ಯಾವುದೇ ಬದಲಾವಣೆ ಆಗಿಲ್ಲ. ಇತರ ಆರೋಪಿಗಳ ವಿರುದ್ಧ ವಿಚಾರಣೆಗೆ ತಡೆಯಾಜ್ಞೆ ಇದೆ. ಆದರೆ ಪ್ರಜ್ವಲ್ ವಿರುದ್ಧ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಪ್ರಜ್ವಲ್ ವಿರುದ್ಧ ನಂಬಲರ್ಹ ಸಾಕ್ಷಿ ಗಳಿವೆ. ವಿಶೇಷ ಮತ್ತು ಸೂಕ್ತ ಕಾರಣ ನೀಡದ ಹೊರತು ಅವರಿಗೆ ಜಾಮೀನು ನೀಡಲು ಹೇಗೆ ಸಾಧ್ಯ ಎಂದು ಅವರು ಕೇಳಿದ್ದಾರೆ.