ಬೆಂಗಳೂರು: ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ನಟಿ ರನ್ಯಾ ರಾವ್ ಮತ್ತು ಇನ್ನಿಬ್ಬರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಎ. 21 ರ ವರೆಗೆ ವಿಸ್ತರಿಸಿ ನಗರದ ನ್ಯಾಯಾಲಯ ಆದೇಶ ಹೊರಡಿಸಿದೆ.
ಆರೋಪಿಗಳಾದ ನಟಿ ರನ್ಯಾ ರಾವ್, ಉದ್ಯಮಿ ತರುಣ್ ರಾಜು, ಚಿನ್ನ ವ್ಯಾಪಾರಿ ಸಾಹಿಲ್ ಜೈನ್ ಎಂಬ ವರ ಬಂಧನದ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿರುವುದಾಗಿದೆ.
ಆರೇಪಿಗಳು ದುಬೈನಿಂದ ಭಾರತಕ್ಕೆ 12.56 ಕೋಟಿ ರೂ. ಗಳಿಗೂ ಅಧಿಕ ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಆರೋಪ ಹೊತ್ತಿದ್ದಾರೆ.