ಧರ್ಮಸ್ಥಳ: ಬೆಳಾಲು ಕಾಡಿನಲ್ಲಿ ದಾರಿಹೋಕರಿಗೆ ಸಿಕ್ಕ ಹೆಣ್ಣು ಮಗುವಿನ ಹೆತ್ತವರು ಕೆಲ ದಿನಗಳ ಹಿಂದೆ ಪತ್ತೆಯಾಗಿದ್ದು, ಈ ಜೋಡಿ ಅಧಿಕೃತವಾಗಿ ತಮ್ಮ ಕುಟುಂಬದ ಸಮ್ಮುಖದಲ್ಲಿ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಎ. 6 ರಂದು ವಿವಾಹವಾಗಿದ್ದಾರೆ.
ದೇವಸ್ಥಾನದ ಅರ್ಚಕರ ಪೌರೋಹಿತ್ಯದಲ್ಲಿ ಈ ಜೋಡಿ ಅಧಿಕೃತವಾಗಿ ವಿವಾಹವಾಗಿದ್ದಾರೆ.
ಬೆಳಾಲು ಮಾಯದ ತಿಮ್ಮಪ್ಪ ಗೌಡರ ಪುತ್ರ ರಂಜಿತ್ ಮತ್ತು ಧರ್ಮಸ್ಥಳ ಕೊಳಂಗಾಜೆಯ ಧರ್ಣಪ್ಪ ಗೌಡರ ಪುತ್ರಿ ಸುಶ್ಮಿತಾ ಅವರೇ ಕಾಡಿನಲ್ಲಿ ಸಿಕ್ಕ ಹೆಣ್ಣು ಮಗುವಿನ ಹೆತ್ತವರಾಗಿದ್ದು, ಇವರಿಬ್ಬರು ಪ್ರೀತಿ ಮಾಡುತ್ತಿದ್ದರು. ಇದರ ಫಲ ಎಂಬಂತೆ ಯುವತಿ ಗರ್ಭಿಣಿಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ನಡೆದಿತ್ತು.
ಆ ಬಳಿಕ ಈ ಜೋಡಿಯ ಸಂಬಂಧದಲ್ಲಿ ಬಿರುಕು ನೀಡಿತ್ತು. ಆಗ ಸುಶ್ಮಿತಾ ಈ ಮಗುವನ್ನು ರಂಜಿತ್ ಮನೆಯಲ್ಲಿ ಬಿಟ್ಟು ಹೋಗಿದ್ದಳು. ರಂಜಿತ್ ಆ ಮಗುವನ್ನು ಕಾಡಿನಲ್ಲಿ ಬಿಟ್ಟಿದ್ದ ಎಂದು ತಿಳಿದು ಬಂದಿದೆ.
ಆ ಮಗುವನ್ನು ಕಾನೂನಾತ್ಮಕವಾಗಿ ಮತ್ತೆ ತಾವು ಪಡೆದುಕೊಳ್ಳುವುದಾಗಿ ಇವರ ಕುಟುಂಬಸ್ಥರು ತಿಳಿಸಿದ್ದಾರೆ.